ಮೈಸೂರು: ಪತ್ನಿ ಮಹಾನಗರ ಪಾಲಿಕೆಯ ಮೇಯರ್ ಆದ ಖುಷಿಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಪತಿ ಮಾದೇಗೌಡ ಅವರು ಪತ್ನಿ ರುಕ್ಮಿಣಿಗೆ ಮುತ್ತು ಕೊಟ್ಟರು.

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ. ಪತ್ನಿ ರುಕ್ಮಿಣಿ ಮೇಯರ್ ಆದ ಸಂತಸದಲ್ಲಿ ಬಹಿರಂಗವಾಗಿ ಪತಿ ಮಾದೇಗೌಡ ಮುತ್ತು ಕೊಟ್ಟು, ಅವರನ್ನು ಹೊತ್ತು ಸಂಭ್ರಮಿಸಿದರು.

ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್ ಆದರೆ, ಜೆಡಿಎಸ್ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅನ್ವರ್ ಬೇಗ್ ( ಅಫ್ತಾಬ್) ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಒಟ್ಟು 73 ಸದಸ್ಯರ ಬಲ ಹೊಂದಿರುವ ಪಾಲಿಕೆಯಲ್ಲಿ ಅಂತಿಮವಾಗಿ ರುಕ್ಮಿಣಿ ಮಾದೇಗೌಡ ಪರ 43 ಮತಗಳು ಲಭಿಸಿದರೆ, ಬಿಜೆಪಿಯ ಸುನಂದಾ ಪಾಲನೇತ್ರ 26 ಮತಗಳನ್ನು ಪಡೆದರು, ಕಾಂಗ್ರೆಸ್‌ನ ಶಾಂತಕುಮಾರಿ ಪರ ಯಾರೂ ಮತ ಚಲಾಯಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.