ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕನ್ನಡ ಶಾಲೆ ಉಳಿವಿಗೆ ಶಿಕ್ಷಕರೇ ಭರವಸೆ- ಎಸ್‌.ಆರ್‌.ರವಿಕುಮಾರ್‌

ಎಸ್‌.ಕೆ. ಫೌಂಡೇಶನ್‌ನಿಂದ ಶಿಕ್ಷಣ ದಿನಾಚರಣೆ; ಪ್ರಶಸ್ತಿ ಪ್ರದಾನ
Published 17 ಸೆಪ್ಟೆಂಬರ್ 2023, 6:39 IST
Last Updated 17 ಸೆಪ್ಟೆಂಬರ್ 2023, 6:39 IST
ಅಕ್ಷರ ಗಾತ್ರ

ಮೈಸೂರು: ‘ಸಾವಿತ್ರಿ ಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಯು ಮಕ್ಕಳ ಶಿಕ್ಷಣಕ್ಕೆ ನೀಡಿದ್ದ ಕಾಳಜಿ ಎಲ್ಲ ಶಿಕ್ಷಕರಿಗೂ ಮಾದರಿ’ ಎಂದು ಮೈಸೂರು ಕೋ–ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕ ಎಸ್‌.ಆರ್‌.ರವಿಕುಮಾರ್‌ ತಿಳಿಸಿದರು.

ನಗರದ ಅಕ್ಕನ ಬಳಗದಲ್ಲಿ ಕಿರಾಳು ಗ್ರಾಮದ ಎಸ್‌.ಕೆ.ಫೌಂಡೇಶನ್‌ನಿಂದ ಶಿಕ್ಷಣ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ಉತ್ತಮ ಶಿಕ್ಷಕ ಪ್ರಶಸ್ತಿ’ ವಿತರಣೆಯಲ್ಲಿ ಮಾತನಾಡಿದರು.

‘ಇಂದು ಖಾಸಗಿ ಶಾಲೆಗಳ, ಇಂಗ್ಲಿಷ್‌ ಶಿಕ್ಷಣದ ಮೋಹದಲ್ಲಿ ಕನ್ನಡ ಶಾಲೆಗಳು ಸೊರಗುತ್ತಿವೆ. ಮಕ್ಕಳಿಗೆ ಶಿಕ್ಷಣ ಬೇಕು, ಜೊತೆಗೆ ನಮ್ಮ ಭಾಷೆಯೂ ಉಳಿಯಬೇಕು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರೂ ಮಾತ್ರ ಭರವಸೆಯಾಗಿ ನಿಲ್ಲುತ್ತಾರೆ’ ಎಂದರು.

ನಿವೃತ್ತ ಶಿಕ್ಷಕರಾದ ಬಿ.ಎಸ್‌.ದೇವಚಂದ್ರ ರತ್ನಾಕರ, ಮುರಳೀಧರ, ಜಿ.ಪುಷ್ಪಾವತಿ ಹಾಗೂ ಮಹಾದೇವಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಎಂ.ಜಿ.ಸುಗುಣಾವತಿ, ಸರಗೂರು ದಡದಹಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಕೆ.ಸವಿತಾ, ಶ್ರೀಕಾಂತ ಬಾಲಿಕಾ ಪ್ರೌಢಶಾಲೆ ಮುಖ್ಯಶಿಕ್ಷಕಿ ಗಾಯಿತ್ರಿ, ಮುಖ್ಯಶಿಕ್ಷಕಿ ಮಹದೇವಮ್ಮ, ದಳವಾಯಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜುನಾಥ್‌, ಜಯಲಕ್ಷ್ಮಿ ವಿಲಾಸ ಆರ್ಯಬಾಲಿಕ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್‌.ಧನರಾಜ್‌, ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪಿ.ಸಂಪತ್‌, ಐಒಇ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್‌.ಜಗದೀಶ್‌, ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಿ.ಎಸ್‌.ಪ್ರಭುಸ್ವಾಮಿ, ವಿದ್ಯಾಶಂಕರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್‌.ಪಿ.ವೇದರಾಧ್ಯ, ವಾಣಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಪರಶುರಾಮೇಗೌಡ, ಶ್ರೀಕೃಷ್ಣ ಲಲಿತಾ ಕಲಾಮಂದಿರ ಮುಖ್ಯಶಿಕ್ಷಕ ಬಿ.ಎಂ.ಪರಮೇಶ್‌ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ರಾಜ್ಯ ಕಾರ್ಯದರ್ಶಿ ಮೋಸಿನ್‌ ಖಾನ್‌, ಎಸ್‌.ಕೆ.ಫೌಂಡೇಶನ್‌ ಅಧ್ಯಕ್ಷ ಸಂತೋಷ್‌ ಕಿರಾಳು, ಡಿಸಿಸಿ ವಕ್ತಾರ ಹುಣಸೂರು ಬಸವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT