ಮೈಸೂರು: ದಶಕದಿಂದ ನನೆಗುದಿಗೆ ಬಿದ್ದಿದ್ದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಕೇಂದ್ರದ ಕಟ್ಟಡ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಕಾರ್ಯಾಚರಣೆಯೂ ಆರಂಭಗೊಂಡಿದೆ. ಈಗಾಗಲೇ 5 ಕಂಪನಿಗಳು ಜನವರಿಯಿಂದ ಕಾರ್ಯಾಚರಿಸುತ್ತಿವೆ. 40 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ₹ 24 ಕೋಟಿ ವೆಚ್ಚದಲ್ಲಿ ಕೇಂದ್ರವು ತಲೆ ಎತ್ತಿದೆ. ಮಾಹಿತಿ ತಂತ್ರಜ್ಞಾನ ಉದ್ಯಮ ಆರಂಭಕ್ಕೆ ಎಲ್ಲ ಸೌಲಭ್ಯಗಳು ಈ ಹೊಸ ನಾವಿನ್ಯ ಕೇಂದ್ರದಲ್ಲಿ ದೊರೆಯಲಿವೆ. ಕೇಂದ್ರ ಲೋಕೋಪಯೋಗಿ ಇಲಾಖೆಯು (ಸಿಡಬ್ಲ್ಯುಡಿ) ನಿರ್ಮಾಣ ಕಾಮಗಾರಿ ನಡೆಸಿದ್ದು, ನೆಲ ಮಹಡಿ ಸೇರಿದಂತೆ ಮೂರು ಅಂತಸ್ತಿನ ಕಟ್ಟಡದಲ್ಲಿ 104 ‘ಪ್ಲಗ್ ಆ್ಯಂಡ್ ಪ್ಲೇ ಸೀಟ್ಸ್’ ಸ್ಟೇಷನ್ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.

100 ಆಸನಗಳ ಸಭಾಂಗಣ, 13 ಆಸನ ಸಾಮರ್ಥ್ಯ ಸಭಾ ಕೊಠಡಿಗಳು ಲಭ್ಯವಿದ್ದು, ದಿನ 24 ಗಂಟೆಯೂ ವೇಗದ ಇಂಟರ್ನೆಟ್ ಸೌಲಭ್ಯಗಳು ಲಭ್ಯವಿವೆ. ಅದರಿಂದ ನವೋದ್ಯಮಿಗಳು, ಸಾಫ್ಟ್ವೇರ್ ಉದ್ದಿಮೆದಾರರಿಗೆ ಅನುಕೂಲವಾಗಲಿದೆ.

‘ಸಾಫ್ಟ್ವೇರ್ ಪಾರ್ಕ್ನಿಂದ ತಂತ್ರಜ್ಞಾನ ಉದ್ಯಮಗಳ ಅಭಿವೃದ್ಧಿ ಆಗಲಿದ್ದು, ಎರಡನೇ ಹಂತದ ನಗರವಾದ ಮೈಸೂರಿನಲ್ಲಿ ನವೋದ್ಯಮ ಆರಂಭಕ್ಕೆ ಪೂರಕ ವಾತಾವರಣ ಕಲ್ಪಿಸಲಾಗಿದೆ’ ಎಂದು ಎಸ್ಟಿಪಿಐ ಬೆಂಗಳೂರಿನ ಟ್ವಿಟರ್ ಖಾತೆಯು ಸೋಮವಾರ ಹೇಳಿದ್ದು, ಸೌಲಭ್ಯಗಳ ಮಾಹಿತಿಯನ್ನೂ ಲಿಂಕ್ಡ್ಇನ್, ಫೇಸ್ಬುಕ್ನಲ್ಲಿ ಹಂಚಿಕೊಂಡಿದೆ.

ಏನಿದು ಎಸ್ಟಿಪಿಐ?:

ಸಾಫ್ಟ್ವೇರ್ ರಫ್ತನ್ನು ಉತ್ತೇಜಿಸಲೆಂದು ಕೇಂದ್ರ ಸರ್ಕಾರವು 1991ರಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಸ್ಥಾಪಿಸಿತು. ಬೆಂಗಳೂರು, ಪುಣೆ, ಭುವನೇಶ್ವರದಲ್ಲಿ ಮೊದಲ ಎಸ್ಟಿಪಿಐ ಕೇಂದ್ರಗಳನ್ನು ತೆರೆಯಲಾಯಿತು. ಇದುವರೆಗೂ 67 ಕೇಂದ್ರಗಳು ದೇಶದಾದ್ಯಂತ ಸ್ಥಾಪನೆಗೊಂಡಿವೆ. ಅವುಗಳಲ್ಲಿ 59 ಟೈರ್ 2 ಮತ್ತು 3 ನಗರಗಳಲ್ಲಿ ಸ್ಥಾಪನೆಯಾಗಿವೆ. ಮೈಸೂರಿನಲ್ಲಿ 1998ರಲ್ಲಿ ಅಂದಿನ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರು ಎಸ್ಟಿಪಿಐನ 13ನೇ ಕೇಂದ್ರ ಸ್ಥಾಪಿಸಿದ್ದರು. ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಚೇರಿ ಕಟ್ಟಡವಿದೆ.

ರಾಜ್ಯದಲ್ಲಿ ಬೆಂಗಳೂರು ನಂತರ ಸಾಫ್ಟ್ವೇರ್ ರಫ್ತಿನಲ್ಲಿ ಮೈಸೂರಿಗೆ ಎರಡನೇ ಸ್ಥಾನವಿದ್ದು, ವಿಮಾನ ನಿಲ್ದಾಣ, ಎಕ್ಸ್ಪ್ರೆಸ್ ವೇ ಜೊತೆಗೆ ಎಸ್ಟಿಪಿಐ ಕೇಂದ್ರ ಆರಂಭಗೊಂಡಿರುವುದರಿಂದ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ. ಉದ್ಯೋಗ ಸೃಷ್ಟಿಯೂ ಆಗಲಿದೆ.

ಉದ್ಘಾಟನೆಗೆ ಸಿದ್ಧ..

ಎಸ್ಟಿಪಿಐ ಕೇಂದ್ರದ ಆವರಣವು 2.36 ಎಕರೆ ವಿಸ್ತಾರವಾಗಿದ್ದು ಕಟ್ಟಡವು 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ನವೋದ್ಯಮಗಳಿಗೆ ಮೂಲಸೌಕರ್ಯ ನೀಡುವುದಷ್ಟೇ ಅಲ್ಲದೆ ಉದ್ಯಮದ ಬೆಳೆವಣಿಗೆಗೆ ಸರ್ಕಾರದಿಂದ ಸಹಾಯ ಸಲಹೆ ಹಾಗೂ ಪೂರಕ ವಾತಾವರಣವನ್ನು ಒದಗಿಸಲಿದೆ. 2016ರಲ್ಲಿ ಪ್ರಾರಂಭವಾದ ಕಾಮಗಾರಿಯು ನಿಗದಿತ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ದಶಕದ ನಂತರ ಸಿದ್ಧವಾಗಿದ್ದು ಉದ್ಘಾಟನೆಯಷ್ಟೇ ಬಾಕಿಯಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಕಾಮಗಾರಿ ಪೂರ್ಣಗೊಂಡಿರುವ ಪತ್ರ ಬರೆಯಲಾಗಿದ್ದು ಸಚಿವರು ಉದ್ಘಾಟನಾ ದಿನಾಂಕ ನಿಗದಿ ಮಾಡಿಲ್ಲ. ಉದ್ಯಮಗಳನ್ನು ಕೇಂದ್ರದಲ್ಲಿ ಆರಂಭಿಸಲು ಅನುಮತಿಯನ್ನು ಸಚಿವಾಲಯ ನೀಡಿದ್ದು ಸದ್ಯದಲ್ಲಿಯೇ ಉದ್ಘಾಟನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.