ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

498 ರೂಬಿಕ್ ಕ್ಯೂಬ್‌ನಲ್ಲಿ ಮೂಡಿದ ಶ್ರೀರಾಮ: ಮೈಸೂರಿನ ಬಾಲಕನ ಕೈಚಳಕ

Published 18 ಜನವರಿ 2024, 14:35 IST
Last Updated 18 ಜನವರಿ 2024, 14:35 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಪಟ್ಟಣದ ಗೋಣಿಕೊಪ್ಪ ರಸ್ತೆಯ ನಿವಾಸಿ  ಪ್ರಣವ್ ಪಿ. ರೂಬಿಕ್ ಕ್ಯೂಬ್‌ ನಲ್ಲಿ ರಾಮನ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾನೆ.  498 ಕ್ಯೂಬ್ ಬಳಸಿ ಚಿತ್ರ ಬಿಡಿಸಿದ್ದು ಆಕರ್ಷನೀಯವಾಗಿದೆ.

ಪುಷ್ಪ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಈತ ರೂಬಿಕ್ ಕ್ಯೂಬ್‌ ಸಾಲ್ವ್‌ ಮಾಡುವುದರಲ್ಲಿ ಪರಿಣಿತ. 22 ವಿವಿಧ ರೀತಿ ಕ್ಯೂಬ್ ಸಾಲ್ವ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಆಫ್ ರೆಕಾರ್ಡ್‌ ಮಾಡಿದ್ದಾನೆ. ಈ ಹಿಂದೆ ಶ್ರೀಕೃಷ್ಣ, ವಿರಾಟ್ ಕೊಯ್ಲಿ, ರಾಹುಲ್ ದ್ರಾವಿಡ್, ಶಿವಕುಮಾರ ಸ್ವಾಮೀಜಿ, ಮೋದಿ ಅವರ ಚಿತ್ರಗಳನ್ನುರೂಬಿಕ್ ಕ್ಯೂಬ್‌ ನಲ್ಲಿ ರಚಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT