ಮೈಸೂರು: ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಆರ್ಎಸ್ಎಸ್ನಲ್ಲಿ ಇದ್ದವರು. ಬಹಳ ಜನರಿಗೆ ಈ ವಿಷಯ ಗೊತ್ತಿಲ್ಲ ಎಂದು ವಿದ್ವಾಂಸರಾದ ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ತಿಳಿಸಿದರು.

ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನದ ವತಿಯಿಂದ ‘ವಿ. ಶ್ರೀನಿವಾಸಪ್ರಸಾದ್: ನಾವು ಕಂಡಂತೆ’ ಅಭಿನಂದನ ಗ್ರಂಥವನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅವರಲ್ಲಿರುವ ಶಿಸ್ತು ಹಾಗೂ ಅವರು ಬಿಜೆಪಿ ಸೇರಿದ್ದನ್ನು ನೋಡಿದರೆ ಅದು ಕೇವಲ ಆಕಸ್ಮಿಕವಾಗಿರದು ಎಂದು ಅನ್ನಿಸುತ್ತದೆ. ಅವರು ಪಕ್ಷಾಂತರಿ ಆದರೂ ತತ್ವಾಂತರಿ ಅಲ್ಲ ಎಂದು ಅವರು ತಿಳಿಸಿದರು.

ರಾಜಕಾರಣಿಗಳು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಸಾಹಿತ್ಯ ಕಾರ್ಯಕ್ರಮಗಳನ್ನು ವೀಕ್ಷಿಸಬೇಕು. ಅವರು ವೇದಿಕೆ ಹತ್ತಬಾರದು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.