ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಯೋಜನೆ ನಿಲ್ಲಿಸುವ ಹೇಳಿಕೆ ಸಮಂಜಸವಲ್ಲ: ಪಿ.ರಾಜು

Published 10 ಜೂನ್ 2024, 4:13 IST
Last Updated 10 ಜೂನ್ 2024, 4:13 IST
ಅಕ್ಷರ ಗಾತ್ರ

ಮೈಸೂರು: ‘ಗ್ಯಾರಂಟಿ ಯೋಜನೆ ನಿಲ್ಲಿಸಿ ಎಂಬ ಹೇಳಿಕೆ ಸಮಂಜಸವಲ್ಲ’ ಎಂದು ಕೆಪಿಸಿಸಿ ಸದಸ್ಯ ಸಂಯೋಜಕ ಅಶೋಕಪುರಂ ಪಿ.ರಾಜು ಹೇಳಿದ್ದಾರೆ.

‘ಜನರ ಅನುಕೂಲ, ಅನನುಕೂಲ ಅವಲೋಕಿಸಿ ಜಾರಿಮಾಡಿದ ಅದ್ಭುತ ಯೋಜನೆಯಿದು. ಇದನ್ನು ನಿಲ್ಲಿಸುವ ಆಲೋಚನೆ ಸರಿಯಲ್ಲ. ಅ ರೀತಿಯ ನಡವಳಿಕೆ ಕಡೆ ಕಾಂಗ್ರೆಸ್ ಮುಖ ಮಾಡಿದರೆ, ನಮಗೂ ಬಿಜೆಪಿಗೂ ಯಾವ ವ್ಯತ್ಯಾಸ ಇರುವುದಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಗ್ಯಾರಂಟಿ ಯೋಜನೆಯ ಫಲಾನುಭವಿಗಳಲ್ಲಿ ಊಟಕ್ಕೆ ಪರದಾಡುತಿದ್ದ ಎಷ್ಟೋ ಮಂದಿ ಈಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರೆ. ಹಲವರು ಕತ್ತಲೆ ಬದುಕಿನಿಂದ ಬೆಳಕು ಕಂಡಿದ್ದಾರೆ. ಮಾಸಿಕ ₹2 ಸಾವಿರ ಕೆಲವರ ಬದುಕಿಗೆ ದಾರಿದೀಪವಾಗಿದ್ದು, ದೇಶಕ್ಕೆ ಮಾದರಿಯಾದ ಯೋಜನೆಯಿದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT