ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುತ್ತೂರಿನಲ್ಲಿ ಅಧ್ಯಯನ ಶಿಬಿರ 20ರಿಂದ

Published 18 ಮೇ 2024, 14:53 IST
Last Updated 18 ಮೇ 2024, 14:53 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರಿನ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಮೇ 20 ರಿಂದ24ರವರೆಗೆ ಸುತ್ತೂರು ಕ್ಷೇತ್ರದಲ್ಲಿ ‘ನಿಜಗುಣ ಶಿವಯೋಗಿಗಳ ಪರಮಾರ್ಥಗೀತೆ ಗ್ರಂಥದ– ಅಧ್ಯಯನ ಶಿಬಿರ’ವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ.

ನಿಜಗುಣ ಶಿವಯೋಗಿಗಳವರ ಪರಮಾರ್ಥಗೀತೆ-ಕೃತಿ ಪರಿಚಯ, ಪ್ರಥಮ ಗತಿ– ವಸ್ತು– ಶಕ್ತಿ– ದ್ವಿತಯಂ, ದ್ವಿತೀಯ ಗತಿ– ಭೂತ ಪಂಚೀಕರಣ, ತೃತೀಯ ಗತಿ– ಗುಣಭೇದ ವಿಕಾರಂ, ಚತುರ್ಥ ಗತಿ– ಪಿಂಡಾಂಡ– ಉದಯ– ವಿಭೇದ, ಪಂಚಮ ಗತಿ– ವಿಶ್ವ ರಚನಾಭೇದಂ, ಷಷ್ಠಮ ಗತಿ– ಬಂಧ ಮೋಕ್ಷ ದ್ವಿತಯಂ, ಸಪ್ತಮ ಗತಿ– ಸಾಧಕನ ಸ್ಥಿತಿ, ಅಷ್ಠಮ ಗತಿ– ಯೋಗದ ಕ್ರಮ, ನವಮ ಗತಿ– ನಿಸ್ಸಂಗ ಯೋಗ, ದಶಮ ಗತಿ– ಚತುರ್ಭೂಮಿಕಾ, ಏಕಾದಶ ಗತಿ– ಯೋಗಿವರನ ಚರಿತಂ, ವಿಷಯದ ಕುರಿತು ಅನುಕ್ರಮವಾಗಿ ಮಲ್ಲಯ್ಯ ಸ್ವಾಮಿಗಳು, ನಿಜಗುಣ ದೇವರು, ಸದಾಶಿವ ಗುರೂಜಿ, ಆರೂಡ ಭಾರತಿ ಸ್ವಾಮೀಜಿ, ಬಿ.ವಿ. ವಸಂತಕುಮಾರ್, ಆರೂಢ ಭಾರತಿ ಸ್ವಾಮೀಜಿ, ಸದಾಶಿವ ಗುರೂಜಿ, ಈಶಪ್ರಸಾದ ಸ್ವಾಮಿ, ಬಿ.ವಿ. ವಸಂತಕುಮಾರ್, ಕೆ. ಅನಂತರಾಮು, ಈಶಪ್ರಸಾದ ಸ್ವಾಮೀಜಿ, ಕೆ.ಅನಂತರಾಮು ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಯೋಗ ಮತ್ತು ಧ್ಯಾನ, ದೇಸಿ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT