ಪಿರಿಯಾಪಟ್ಟಣ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಗೊಲ್ಲರ ಬೀದಿಯಲ್ಲಿ ಗುರುವಾರ ನಡೆದಿದೆ.

ನಿಶಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. 4 ವರ್ಷಗಳ ಹಿಂದೆ ಪಟ್ಟಣದ ವರ್ತಕ ಜಯಶೀಲ ಅವರ ಪುತ್ರ ಪ್ರದೀಪ್ ಅವರೊಂದಿಗೆ ವಿವಾಹವಾಗಿತ್ತು.

ಗಂಡನ ಮನೆಯವರು ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೋಷಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪತಿ ಪ್ರದೀಪ್, ಮಾವ ಜಯಶೀಲ, ಅತ್ತೆ ಇಂದಿರಾ, ಮಗಳು ಸೌಮ್ಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಮನೆಯ ಸುತ್ತ ಜನ ಸೇರಿದ್ದರಿಂದ ಸಿಪಿಐ ಬಿ.ಆರ್ ಪ್ರದೀಪ್, ಹುಣಸೂರು ಸಿಪಿಐ ಪೂವಯ್ಯ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.