ಮೈಸೂರು: ಆಷಾಢದ ಶುಕ್ರವಾರಗಳಂದು ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆಂದು ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ಹಲವು ಸಂಘ ಸಂಸ್ಥೆಗಳು ಪ್ರಸಾದದ ವ್ಯವಸ್ಥೆ ಮಾಡುತ್ತವೆ. ಕೆಲವರು ವೈಯಕ್ತಿಕವಾಗಿಯೂ ಅಲ್ಲಲ್ಲಿ ಉಪಾಹಾರ ವಿತರಿಸುತ್ತಾರೆ. ಆದರೆ, ದೊಡ್ಡ ಮಟ್ಟದಲ್ಲಿ ಸಾವಿರಾರು ಮಂದಿಗೆ ‘ಪ್ರಸಾದ’ವನ್ನು ವ್ಯವಸ್ಥಿತವಾಗಿ ಉಣಬಡಿಸುವ ಕೆಲಸವನ್ನು ನಗರದ ನೂರಡಿ ರಸ್ತೆಯ ಚಾಮುಂಡೇಶ್ವರಿ ಸೇವಾ ಸಮಿತಿ ಮಾಡಿಕೊಂಡು ಬಂದಿದೆ. ಈ ಸೇವಾ ಕಾರ್ಯಕ್ಕೀಗ ‘ದ್ವಿದಶಮಾನೋತ್ಸವ’ದ ಸಂಭ್ರಮ.

ಇದೇ 27ರಂದು ಆಷಾಢದ ಮೊದಲ ಶುಕ್ರವಾರದ ಅಂಗವಾಗಿ ಸಾವಿರಾರು ಮಂದಿ ಬೆಟ್ಟಕ್ಕೆ ಬರುತ್ತಾರೆ. ಹೀಗೆ ಬರುವವರು, ದರ್ಶನ ಮುಗಿಸಿ ಬರುವಾಗ ‘ಅನ್ನಪ್ರಸಾದ’ ಸಿಕ್ಕರೆ ಸೇವಿಸಿ ಪುನೀತಭಾವ ತಳೆಯುತ್ತಾರೆ. ಅಂತಹ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯವನ್ನು ಸಮಿತಿಯು ಮಾಡುತ್ತಿದೆ. ಈ ಬಾರಿ, 20ನೇ ವರ್ಷದ ಕಾರ್ಯಕ್ರಮಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಎರಡು ವರ್ಷ ಅನ್ನಸಂತರ್ಪಣೆ ನಡೆದಿರಲಿಲ್ಲ. ಇಲ್ಲದಿದ್ದರೆ, ಈಗ 22ನೇ ವರ್ಷದ ಕಾರ್ಯಕ್ರಮ ಆಗುತ್ತಿತ್ತು.

ಸಮಿತಿಯು ಇದೇ 20ರಂದು ಸಂಜೆ 7.30ಕ್ಕೆ ನೂರಡಿ ರಸ್ತೆಯ ಲಕ್ಷ್ಮಿ ಚಿತ್ರಮಂದಿರದ ಎದುರು ಚಾಮುಂಡೇಶ್ವರಿ ದೇವಿಯ ಫೋಟೊ ಇಟ್ಟು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದೆ. 21ರಿಂದ ವಿದ್ಯಾರಣ್ಯಪುರಂ ನಿತ್ಯಾನಂದ ಕಲ್ಯಾಣಮಂಟಪದಲ್ಲಿ ಸಿಹಿ ತಿಂಡಿ ತಯಾರಿ ಶುರುವಾಗಲಿದೆ. ಪ್ಯಾಕಿಂಗ್ ಕಾರ್ಯವನ್ನು ಜ. 26ರೊಳಗೆ ಮುಗಿಸಿ, ಅವುಗಳನ್ನು ಬೆಟ್ಟಕ್ಕೆ ರವಾನೆ ಮಾಡಲಾಗುತ್ತದೆ. ಈ ಬಾರಿಯೂ 25ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಸಾದ ವ್ಯವಸ್ಥೆ ಮಾಡಲು ಸಮಿತಿ ನಿರ್ಧರಿಸಿದೆ.

ಬೆಟ್ಟದಲ್ಲಿರುವ ಮಲ್ಟಿಲೆವಲ್ ಪಾರ್ಕಿಂಗ್ ತಾಣದಲ್ಲಿ ಕುರ್ಚಿ– ಟೇಬಲ್ಗಳನ್ನು ಹಾಕಿ, ಬಾಳೆಎಲೆಯಲ್ಲಿ ಅನ್ನಸಂತರ್ಪಣೆ ಮಾಡಲಾಗುವುದು.

‘27ರಂದು (ಶುಕ್ರವಾರ) ಬೆಳಿಗ್ಗೆ 6ರಿಂದ 9ರವರೆಗೆ ಉಪಾಹಾರ ಬಡಿಸಲಾಗುತ್ತದೆ. ಪೊಂಗಲ್, ಚಟ್ನಿ, ಹುಳಿ ಗೊಜ್ಜು, ಉ್ಪಪಿಟ್ಟು, ಕೇಸರಿ ಬಾತು ಉಪಾಹಾರ ನೀಡಲಾಗುವುದು. ಬೆಳಿಗ್ಗೆ 10ರ ಸುಮಾರಿನಿಂದಲೇ ಊಟ ಬಡಿಸುವುದು ಆರಂಭವಾಗಲಿದೆ. ಕೋಸಂಬರಿ, ಪಲ್ಯ, ಹಪ್ಪಳ, ಉಪ್ಪಿನಕಾಯಿ, ಬಿಸಿಬೇಳೆಬಾತು, ಅನ್ನ–ಸಾಂಬಾರ್, ರಸಂ, ಮೊಸರು, ಇದರೊಂದಿಗೆ ಬಾದಾಮ್ಪುರಿ ಸಿಹಿ ತಿನಿಸಿನ ಊಟವನ್ನು ಬಡಿಸಲಾಗುವುದು. 30ಸಾವಿರ ಬಾದಾಮ್ಪೂರಿ ತಯಾರಿಸಲಾಗುವುದು. ಸಮಿತಿಯ ಸದಸ್ಯರು, ಮಾಧ್ಯಮದವರು ಹಾಗೂ ಗಣ್ಯರಿಗೆ ಲಡ್ಡು ಕೂಡ ಬಡಿಸಲಾಗುವುದು’ ಎಂದು ಸಮಿತಿಯ ಪ್ರಮುಖ ನಾಗೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಮಿತಿಯವರು ತಿಂಗಳಿಗೆ ಇಂತಿಷ್ಟು ಹಣ ಹಾಕಿ ನಿರ್ವಹಿಸುತ್ತೇವೆ. ಮೈಸೂರು ಹಾಗೂ ನೆರೆಯ ಜಿಲ್ಲೆಗಳ ದಾನಿಗಳು ಆಹಾರ ಧಾನ್ಯ ನೀಡುತ್ತಾರೆ
ನಾಗೇಶ್ ಸದಸ್ಯ ಚಾಮುಂಡೇಶ್ವರಿ ಸೇವಾ ಸಮಿತಿ

ಹೋದ ವರ್ಷ ಬೆಟ್ಟದಲ್ಲಿ ಅನ್ನಪ್ರಸಾದ ಸೇವಿಸಿದ್ದೆ. ಸಮಿತಿಯವರು ಬಡಿಸುವುದು ಸೇರಿದಂತೆ ಎಲ್ಲ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ
ಸುವರ್ಣಾ ರಾಘವೇಂದ್ರ ನಗರ ನಿವಾಸಿ

ಸಿಹಿ ಪುನರಾವರ್ತನೆ ಮಾಡುವುದಿಲ್ಲ

‘ಇಲ್ಲಿವರೆಗೆ ಬಾದಾಮ್ಪೂರಿಯನ್ನು ನಾವು ಮಾಡಿಸಿರಲಿಲ್ಲ. ಪ್ರತಿ ವರ್ಷವೂ ಒಂದೊಂದು ಹೊಸ ಸಿಹಿತಿನಿಸು ಬಡಿಸುತ್ತೇವೆ. ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ನಾಗೇಶ್. ‘ಸಮಿತಿಯಲ್ಲೀಗ 162 ಮಂದಿ ಸದಸ್ಯರಿದ್ದೇವೆ. ನಾವೆಲ್ಲರೂ ಇಂತಿಷ್ಟು ಹಣ ಹಾಕುತ್ತೇವೆ. ಇದಕ್ಕೆಂದೇ ನಿಧಿ ಮಾಡಿದ್ದೇವೆ. ಕೆಲವು ದಾನಿಗಳು ಅಕ್ಕಿ ಬೇಳೆ ಸಕ್ಕರೆ ಮೊದಲಾದವುಗಳನ್ನು ಕೊಡುತ್ತಾರೆ. ನಾವು ಸಾರ್ವಜನಿಕವಾಗಿ ಚಂದಾ ವಸೂಲಿ ಮಾಡುವುದಿಲ್ಲ’ ಎಂದು ತಿಳಿಸಿದರು.

ಬೆಲೆ ಏರಿಕೆ ಕಾರಣದಿಂದ ‘ಹಿಂದಿನ ವರ್ಷಗಳಲ್ಲಿ ಸರಾಸರಿ ₹ 4 ಲಕ್ಷದಿಂದ ₹ 5 ಲಕ್ಷ ವೆಚ್ಚ ಆಗುತ್ತಿತ್ತು. ಈ ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೊದಲಾದ ಕಾರಣದಿಂದಾಗಿ ₹ 6.50 ಲಕ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ವಿವಿಧ ವೃತ್ತಿಪರರು ಬ್ಯಾಂಕ್ ನೌಕರರು ಸ್ನೇಹಿತರು ಸೇರಿ ನಡೆಸಿಕೊಂಡು ಹೋಗುತ್ತಿದ್ದೇವೆ. ಅಡುಗೆಗೆ 70 ಮಂದಿ ಕೆಲಸ ಮಾಡಲಿದ್ದಾರೆ. ಸಮಿತಿಯ ಸದಸ್ಯರೆಲ್ಲರೂ ಸ್ವಯಂ ಸೇವಕರಾಗಿ ಬಡಿಸುವುದು ಮೊದಲಾದ ಕೆಲಸ ನಿರ್ವಹಿಸುತ್ತೇವೆ’ ಎನ್ನುತ್ತಾರೆ ನಾಗೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.