ತಿ.ನರಸೀಪುರ: ಮಳವಳ್ಳಿ - ತಿ. ನರಸೀಪುರ ಮಾರ್ಗದ ಮುಡುಕನಪುರ ಹಾಗೂ ನೆರೆ ಗ್ರಾಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಕೊಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಮಂಡ್ಯ ಸಾರಿಗೆ ವಿಭಾಗಿಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದೆ.

ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿ ಮುಡುಕನಪುರ–ಮಳವಳ್ಳಿ–ತಿ.ನರಸೀಪುರ ಸಂಪರ್ಕಿಸುವ ಮಾರ್ಗದ (ಹುಚ್ಚನದೊಡ್ಡಿ ಗೇಟ್, ರಾಗಿ ಬೊಮ್ಮನಹಳ್ಳಿ, ಹಂಗರಾಪುರ, ವಡಕೆಪುರ ಶನೀಶ್ವರ ದೇವಸ್ಥಾನ, ನಲ್ಲಿಗೆರೆ , ರಾಮೇಗೌಡನಪುರ ಹಣಕೊಳ ಗೇಟ್, ಕೆಂಪನಪುರ, ಎಸ್.ದೊಡ್ಡಪುರ, ಚಿದರವಳ್ಳಿ ಮುಡುಕನಪುರ, ಹಲವಾರ ದೊಡ್ಡಬಾಗಿಲು ಗೇಟ್, ದೊಡ್ಡಬಾಗಿಲು, ಕೃಷ್ಣಾಪುರ, ಕಾರ್ಗಳ್ಳಿ,ಕೈಯಂಬಳ್ಳಿ, ಕೆಬ್ಬೇಹುಂಡಿ, ಮೆಗಡಹಳ್ಳಿ, ಮುಸುವಿನಕೊಪ್ಪಲು, ಬೆನಕನಹಳ್ಳಿ, ತಿ–ನರಸೀಪುರ ಗ್ರಾಮಗಳ) ಜನರು, ವಿದ್ಯಾರ್ಥಿಗಳಿಗೆ ಸಂಚರಿಸಲು ತೊಂದರೆಯಾಗಿದೆ. ಸಮಯಕ್ಕೆ ಸರಿಯಾಗಿ ಬಸ್ಗಳಿಲ್ಲದೆ ರೈತರು, ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಅನನುಕೂಲವಾಗಿದೆ. ತುರ್ತಾಗಿ ಕ್ರಮ ಕೈಗೊಂಡು ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಿಸಬೇಕು ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಎಸ್. ಪಿ ಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್, ತಿ ನರಸೀಪುರ ತಾಲ್ಲೂಕು ಮಹಿಳಾ ಅಧ್ಯಕ್ಷೆ ರೂಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ ಪಿ ಪರಶಿವಮೂರ್ತಿ, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಕುರುಬೂರು ಶಿವಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.