ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಕ್ಷೇತ್ರ ನಿರ್ಮಾಣಕ್ಕೂ ಶಿಕ್ಷಕರೇ ಕಾರಣL ಬನ್ನೂರು ಕೆ.ರಾಜು

Published : 15 ಸೆಪ್ಟೆಂಬರ್ 2024, 16:29 IST
Last Updated : 15 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ಮೈಸೂರು: ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಇಲ್ಲಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು.

ಶಿಕ್ಷಕರಾದ ಬಾಗಳಿ ಮಹೇಶ್, ಸಿ.ಎಲ್. ಶರ್ಮಿಳಾ, ಎಂ.ಜಿ.ಸುಗುಣಾವತಿ, ಎಸ್.ಸಿ. ವೇದರತ್ನಾ, ತಸ್ಮೀನಾ ಬಾನು, ಅವರಿಗೆ ‘ಭಾರತ ರತ್ನ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಸೇವಾ ಪ್ರಶಸ್ತಿ’, ಶಿಕ್ಷಕರಾದ ಜಯಪ್ಪ ಹೊನ್ನಾಳಿ ಮತ್ತು ಸುಗಂಧಮ್ಮ ಜಯಪ್ಪ ಅವರಿಗೆ ಕ್ರಮವಾಗಿ ‘ಮಹಾತ್ಮ ಜ್ಯೋತಿಬಾ ಫುಲೆ  ಹಾಗೂ ‘ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಬನ್ನೂರು ಕೆ.ರಾಜು, ‘ಭಾರತೀಯ ಸಂಸ್ಕೃತಿಯಲ್ಲಿ ಬೇರಾರಿಗೂ ಸಿಗದ ಮಹತ್ವದ ಸ್ಥಾನಮಾನ ಗುರುಗಳಿಗಿದೆ. ಎಲ್ಲ ಕ್ಷೇತ್ರಗಳ ನಿರ್ಮಾಣಕ್ಕೂ ಅವರು ಕಾರಣಕರ್ತರಾಗಿದ್ದಾರೆ’ ಎಂದರು.

ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ ಉದ್ಘಾಟಿಸಿದರು. ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಮಾತನಾಡಿದರು. ಸುತ್ತೂರು ಜೆಎಸ್ಎಸ್ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಸುನಂದಾ ಭೂಪಾಳಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಲೀಲಾ ಪ್ರಕಾಶ್, ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಮಾಲಂಗಿ ಸುರೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT