ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರ ಕೊಲ್ಲುವ ಚಿರತೆಗೆ ಗುಂಡಿಕ್ಕುವುದೇ ಪರಿಹಾರ: ಕೃಪಾಕರ

Last Updated 27 ಜನವರಿ 2023, 14:49 IST
ಅಕ್ಷರ ಗಾತ್ರ

ಮೈಸೂರು: ‘ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಿರುವ, ಗಾಯಗೊಂಡ ಅಥವಾ ವಯಸ್ಸಾದ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಅಂಥವುಗಳನ್ನು ನಿಖರವಾಗಿ ಗುರುತಿಸಿ ಗುಂಡಿಕ್ಕುವುದೇ ಪರಿಹಾರ’ ಎಂದು ವನ್ಯಜೀವಿ ತಜ್ಞ ಕೃಪಾಕರ ಹೇಳಿದರು.

ಇಲ್ಲಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಂದು ಚಿರತೆಯಿಂದ ಎಲ್ಲ ಚಿರತೆಗಳ ಮೇಲೂ ಜನರಲ್ಲಿ ಮೂಡುವ ದ್ವೇಷ ಅವುಗಳ ಸಂತತಿಯನ್ನೇ ನಾಶ ಮಾಡಬಲ್ಲದು. ಹೀಗಾಗಿ ವಿಶೇಷ ವಿಧಾನಗಳಿಂದ ನಿರ್ದಿಷ್ಟ ಚಿರತೆಯನ್ನು ಗುರುತಿಸಿ ಗುಂಡಿಕ್ಕಬೇಕು’ ಎಂದು ಪ್ರತಿಪಾದಿಸಿದರು.

‘ಚಿರತೆ ಗಣತಿ ಕಷ್ಟ. ಕರ್ನಾಟಕದಲ್ಲಿ ಕಾಡಿಗಿಂತಲೂ ನಾಡಿನಲ್ಲೇ ಸಾವಿರಾರು ಚಿರತೆಗಳಿವೆ. ಜನರೇ ಅವುಗಳಿಗೆ ವಿಷ ಹಾಕುವ ಅಥವಾ ಹೇಗಾದರೂ ಕೊಲ್ಲಲು ಮುಂದಾದರೆ ಕಷ್ಟವಾಗುತ್ತದೆ. ಸಂತತಿಯ ಉಳಿವಿಗಾಗಿ ಒಂದು ಚಿರತೆಯು ಪ್ರಾಣ ತ್ಯಾಗ ಮಾಡಬೇಕಾಗುತ್ತದೆ’ ಎಂದರು.

‘ಮನುಷ್ಯ, ಭೂಮಿಯ ಮೇಲಿರುವ 80 ಲಕ್ಷ ಜೀವಿಗಳ ವಿರುದ್ಧವಿದ್ದಾನೆ. ವನ್ಯಜೀವಿಗಳ ಸಮಸ್ಯೆಗಳನ್ನು ಗ್ರಹಿಸುವ ಸಾವಧಾನ ಅವನಿಗೆ ಇಲ್ಲವಾಗಿದೆ. ಸೂಕ್ಷ್ಮತೆಗಳು ಮಾಯವಾಗಿವೆ. ಅದೇ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT