‘ಈ ಸಂಬಂಧ ಹುಣಸೂರು ಸಾಮಾಜಿಕ ಅರಣ್ಯ ಇಲಾಖೆ ಕಚೇರಿಗೆ ಲಿಖಿತ ದೂರು ನೀಡಿ, ಶ್ರೀಗಂಧದ ಮರ ಕಳ್ಳರು ಕತ್ತರಿಸಿದ್ದು, ಸಂರಕ್ಷಿಸಿ ಮನೆಯಲ್ಲಿ ಇಡಲಾಗಿದೆ. ಇಲಾಖೆ ಅಧೀನಕ್ಕೆ ಪಡೆಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದೆವು. ಇಲಾಖೆ ಸಕಾಲಕ್ಕೆ ಬಾರದ ಕಾರಣ ಮರದ ದಿಮ್ಮಿಯನ್ನು ಮನೆಯಲ್ಲಿ ಇಟ್ಟಿದ್ದು, ಜು.27ರಂದು ಅಪರಿಚಿತರು ಮನೆಯಲ್ಲಿನ ಶ್ರೀಗಂಧದ ತುಂಡನ್ನು ಅಪಹರಿಸಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಅವರನ್ನು ತಡೆಯಲು ಪ್ರಯತ್ನಿಸಿದಾಗ ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ’ ಎಂದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.