ಮೈಸೂರು: ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ರಾತ್ರಿ, ಬಲೂನ್ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಪ್ರಕರಣವು ಶುಕ್ರವಾರ ಹಲವು ಚರ್ಚೆಗಳಿಗೆ ಕಾರಣವಾಯಿತು. ಇದು, ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ವಿವಿಧ ತಂಡಗಳು ಭೇಟಿ ನೀಡಿ ಪರಿಶೀಲಿಸಿದರೆ, ಗಾಯಾಳುಗಳು ಚಿಕಿತ್ಸೆಗೆ ದಾಖಲಾಗಿರುವ ಕೆ.ಆರ್. ಆಸ್ಪತ್ರೆಗೆ ಜನಪ್ರತಿನಿಧಿಗಳು ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಗಾಯಗೊಂಡವರ ಕುಟುಂಬಸ್ಥರು ಬಂದು, ತಮ್ಮವರ ಹುಡುಕಾಟದಲ್ಲಿ ತೊಡಗಿದರು.

ನಂಜನಗೂಡಿನ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ, ಬೆಂಗಳೂರಿನ ಬ್ಯಾಡರಾಯನಪುರ ನಿವಾಸಿ ಲಕ್ಷ್ಮಿ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ‘ಅಸಂಘಟಿತ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯ ನಿರ್ಮಿಸಲು ಪಾಲಿಕೆಯಲ್ಲಿ ಮಾತನಾಡಿದ್ದೇನೆ. ಆದರೆ ಆಯುಕ್ತರು ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಮತ್ತೆ ಪ್ರಶ್ನಿಸುತ್ತೇನೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ನೀಡುವ ಅವಕಾಶವಿದ್ದು, ನಾನೂ ಈ ಬಗ್ಗೆ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

‘ಈ ಘಟನೆ ಕಾನೂನು ಸುವ್ಯವಸ್ಥೆ ವಿಫಲ ಅಲ್ಲ, ಇದು ಒಂದು ಅಪಘಾತ. ಆದರೆ ಈ ರೀತಿಯ ಘಟನೆಗಳಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಹಂಪಿಯಲ್ಲಿ ನಡೆದ ಕೊಲೆ ಪ್ರಕರಣದಿಂದಾಗಿ ಅಲ್ಲಿ ಶೇ 80ರಷ್ಟು ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ. ನಗರದಲ್ಲೂ ಅಪರಾಧ ಪ್ರಕರಣ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕೇಂದ್ರದ ಅಧಿವೇಶನದಲ್ಲೂ ಮಾತನಾಡಿದೆ. ಅಪರಾಧ ಪ್ರಕರಣ ನಿಯಂತ್ರಣಕ್ಕೆ ತರಬೇಕಿದೆ. ಘಟನೆಯ ಬಗ್ಗೆ ವೈಯಕ್ತಿಕ ಹೇಳಿಕೆ ನೀಡದೆ, ತಜ್ಞರ ವರದಿಗೆ ಕಾಯೋಣ’ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಇದ್ದರು.

ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ್ ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ‘ಮೃತ ಮಂಜುಳಾ ಅವರ ಕುಟುಂಬಕ್ಕೆ ಪರಿಹಾರ ಕೊಡಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಹೀಲಿಯಂ ಸಿಲಿಂಡರ್ ಬಳಸುವವರ ಮೇಲೆ ನಿಗಾ ಇಡಬೇಕು. ಪರವಾನಗಿ ಇಲ್ಲದೆ
ರಸ್ತೆ ಬದಿಯಲ್ಲಿ ಸಾಕಷ್ಟು ಜನರು ಸಿಲಿಂಡರ್ ಇಟ್ಟುಕೊಂಡು ಬಲೂನ್ ಮಾರಾಟ ಮಾಡುವುದನ್ನು ನಾನೂ ನೋಡಿದ್ದೇನೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದರು.

ಕುಟುಂಬಸ್ಥರ ಅಳಲು: ತಾಯಿ ನೆನೆದು ಕಣ್ಣೀರಾದ ಮಗಳು

ಕೆ.ಆರ್. ಆಸ್ಪತ್ರೆ ಆವರಣವು ದಿನವಿಡೀ ಭಾವನಾತ್ಮಕ ಸನ್ನಿವೇಶನಕ್ಕೆ ಸಾಕ್ಷಿಯಾಯಿತು. ಲಕ್ಷ್ಮಿ ಅವರು ಮಗಳು ಹಾಗೂ ನಾದಿನಿ ರಂಜಿತಾ ಅವರ ಮಗುವಿನೊಂದಿಗೆ ಬೆಳವಾಡಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು.

ಲಕ್ಷ್ಮಿ ಅವರ ಮಗಳು ಮಾತನಾಡಿ ‘ವಸ್ತುಪ್ರದರ್ಶನ ನೋಡಿಕೊಂಡು ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಬ್ಲಾಸ್ಟ್ ಆಗುವಾಗ ಅಮ್ಮ ಮತ್ತು ಅತ್ತೆ ಮುಂದೆ ಇದ್ದುದರಿಂದ ನಮಗೆ ಏನೂ ಆಗಲಿಲ್ಲ. ಅವರಿಗೆ ಗಾಯಗಳಾಯ್ತು’ ಎಂದು ಕಣ್ಣೀರಾದರು.

ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಮಂಜುಳಾ ಅವರ ಸಹೋದರ ‘ನನ್ನ ತಂಗಿ ಮನೆಯಲ್ಲೇ ಇರುತ್ತಿದ್ದಳು. ಗುರುವಾರ ಅರಮನೆಯ ಲೈಟಿಂಗ್ಸ್ ನೋಡಲು ತೆರಳಿದ್ದಳು. ಸಿಲಿಂಡರ್ ಸ್ಫೋಟವಾಗಿ ಗಾಯಗೊಂಡಿರುವುದು ಬೆಳಿಗ್ಗೆ ಗೊತ್ತಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.