‘ಪ್ರಾಂಶುಪಾಲರೇ ಮುಖ್ಯಸ್ಥರು’
‘ಚಾಮರಾಜನಗರ ಮಂಡ್ಯ ಹಾಸನದ ಪರೀಕ್ಷಾ ಕೇಂದ್ರಗಳಲ್ಲಿ ಅಂತಿಮ ವರ್ಷದ ಪರೀಕ್ಷೆ ಕಾರಣ ವಿದ್ಯಾರ್ಥಿಗಳೂ ಕಡಿಮೆ ಇದ್ದಾರೆ. ಅಲ್ಲದೇ ಪ್ರಾಂಶುಪಾಲರೇ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಾಗಿರುವುದರಿಂದ ಉಪ ಮುಖ್ಯಸ್ಥರ ನೇಮಕ ಮಾಡಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ ತಿಳಿಸಿದರು. ‘ಉಪ ಮುಖ್ಯಸ್ಥರನ್ನು ನೇಮಿಸಿದರೆ ಪ್ರಾಂಶುಪಾಲರಿಗೆ ಅಗೌರವ ತೋರಿದಂತಾಗುತ್ತಾಗುತ್ತದೆ. ಪಾರದರ್ಶಕವಾಗಿಯೇ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು. ‘ನಿಯಮಾವಳಿಯಂತೆ ಪರೀಕ್ಷೆ ನಡೆಸಲಾಗುತ್ತಿದೆ. ಐದು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದ್ದು ಕೇಂದ್ರಗಳಿಗೆ ತೆರಳಿ ನಿತ್ಯ ಪರಿಶೀಲನೆ ನಡೆಸುತ್ತಿವೆ’ ಎಂದು ಹೇಳಿದರು. ಈ ಬಗ್ಗೆ ಪರೀಕ್ಷಾ ಕೇಂದ್ರಗಳಿರುವ ಕಾಲೇಜುಗಳಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಯಾರೂ ಹಾಗೂ ಯಾವ ತಂಡವೂ ಬಂದಿಲ್ಲವೆಂದು ಅಧ್ಯಾಪಕರು ತಿಳಿಸಿದರು. ಅದರ ಸ್ಪಷ್ಟನೆಗೆ ಕುಲಸಚಿವರಿಗೆ ಕೇಳಿದಾಗ ‘ಸ್ಕ್ವಾಡ್‌ಗಳೂ ಭೇಟಿ ನೀಡುತ್ತಿವೆ’ ಎಂದಷ್ಟೇ ಹೇಳಿದರು.