ಮೈಸೂರು: ವಾರಾಂತ್ಯ ಲಾಕ್‌ಡೌನ್ ಪ್ರಯುಕ್ತ ಶನಿವಾರ ಮಧ್ಯಾಹ್ನದವರೆಗೂ ವಾಹನ ಸಂಚಾರ ಇತ್ತು. ಮಧ್ಯಾಹ್ನ ಬಳಿಕ ರಸ್ತೆಗಳು ಭಣಗುಡಲಾರಂಭಿಸಿದವು. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 39 ದ್ವಿಚಕ್ರ ವಾಹನಗಳು ಹಾಗೂ 11 ಸೇರಿದಂತೆ 50 ವಾಹನಗಳನ್ನು ಪೊಲೀಸರುವಶಪಡಿಸಿಕೊಂಡಿದ್ದಾರೆ.

ದಿನಸಿ ಅಂಗಡಿಗಳು ಮಧ್ಯಾಹ್ನದವರೆಗೆ ತೆರೆದಿದ್ದವು. ಮಧ್ಯಾಹ್ನದ ಬಳಿಕ ಅವೂ ಬಾಗಿಲು ಮುಚ್ಚಿದವು. ಇದರಿಂದ ಎಲ್ಲ ರಸ್ತೆಗಳ ಅಂಗಡಿಗಳು ಸ್ತಬ್ದಗೊಂಡವು.

ನಗರ, ಗ್ರಾಮಾಂತರ ಸಾರಿಗೆ ಬಸ್‌ಗಳ ಸಂಚಾರವೂ ಕಡಿಮೆ ಇತ್ತು. ಆಟೊಗಳಿಗೂ ಸಾರ್ವಜನಿಕರಿಂದ ಬೇಡಿಕೆ ಇರಲಿಲ್ಲ.

ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಯಷ್ಟೇ ಇತ್ತು. ಶ್ರಾವಣ ಶನಿವಾರವಾಗಿರುವುದರಿಂದ ಪ್ರಮುಖ ದೇವಾಲಯಗಳನ್ನು ಮುಚ್ಚಲಾಗಿತ್ತು. ಇದರಿಂದ ಜನಸಂಚಾರವಿರಳವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.