ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ

Published 17 ಜನವರಿ 2024, 15:52 IST
Last Updated 17 ಜನವರಿ 2024, 15:52 IST
ಅಕ್ಷರ ಗಾತ್ರ

ಸರಗೂರು: ಸಮೀಪದ ಹುಲಿಕುರ ಗ್ರಾಮದಲ್ಲಿ ಬುಧವಾರ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

ದೇವಸ್ಥಾನವನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆಗಳ ಮೆರವಣಿಗೆ ನಡೆಸಲಾಯಿತು. ದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಿ ಬಂತು. ಭಕ್ತರು ಹಣ್ಣು, ದವನ ಎಸೆದರು.

ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವರು ದೇವರ ನಾಮ ಪಠಿಸಿದರು. ಗೋವಿಂದ.. ಗೋವಿಂದ.. ಎಂದು ನಾಮ ಪಠಿಸುತ್ತಾ ದಾಸ ಗುಡ್ಡರು ದೊಣ್ಣೆ ವರಸೆ ಹಾಡಿದರು. ಇನ್ನು ಕೆಲವರು ದೇವರಿಗೆ ಹೊತ್ತ ಹರಕೆ ತೀರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿತ್ತು.

ವೇಣುಗೋಪಾಲ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಬಾಲಕೃಷ್ಣ, ಗೌರವಾಧ್ಯಕ್ಷ ಪದ್ಮರಾಜ್, ನಿರ್ದೇಶಕರಾದ ಕೆ.ಚಿಕ್ಕವೀರನಾಯಕ, ಎಸ್.ವಿ.ವೇಣುಗೋಪಾಲ್, ಖಜಾಂಚಿ ಮೋಹನ್‌ರಾಜ್, ಹನುಮಶೆಟ್ಟಿ, ಎನ್.ರಮೇಶ್, ಬಿ.ಸಿ.ಬಸಪ್ಪ, ಚಿಕ್ಕದೇವನಾಯಕ, ನವನೀತ್, ನಿರಂಜನ್‌ರಾಜ್ ಅರಸ್, ಗೋವಿಂದೇಗೌಡ, ರವಿಕುಮಾರ್, ಅಭಿಕುಮಾರ್, ಬಾಲಕೃಷ್ಣ, ಗೋಪಾಲಯ್ಯ, ಗೋವಿಂದನಾಯಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT