ಮೈಸೂರು: ಎಚ್.ಡಿ. ಕೋಟೆ ತಾಲ್ಲೂಕಿನ ಸುಂಕದಕಟ್ಟೆ ಅರಣ್ಯ ವಲಯದಲ್ಲಿ ಮಂಗಳವಾರ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿಯಿಂದ ಕಳ್ಳಬೇಟೆ ತಡೆ ಶಿಬಿರದ ಹೊರಗುತ್ತಿಗೆ ಕಾವಲುಗಾರ ಮಾದ (47) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮಾದ ತಮ್ಮ ತಂಡದ ಇತರ ಕಾವಲುಗಾರರೊಡನೆ ಮಧ್ಯಾಹ್ನ 12ರ ಸುಮಾರಿಗೆ ಹಸಿಹಿಂಡಲಕಡ ಗಸ್ತಿನ ಅರಣ್ಯದಲ್ಲಿ ಗಸ್ತಿಗೆ ತೆರಳಿದ್ದರು. ಈ ವೇಳೆ ಕರಡಿ ದಾಳಿ ನಡೆಸಿದ್ದು, ಇದರಿಂದ ಮಾದ ಅವರ ತಲೆ, ಮುಖದ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ. ಅವರನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಎಚ್.ಡಿ. ಕೋಟೆ ತಾಲ್ಲೂಕಿನ ಮಂಚೇಗೌಡನಹಳ್ಳಿ ಹಾಡಿಯವರಾದ ಮಾದ ಕಳೆದ ಐದು ವರ್ಷದಿಂದ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾವಲುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.