ಮೈಸೂರು: ನೆಹರೂ ಯುವಕೇಂದ್ರ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ 120
ಕಿ.ಮೀ. ದೂರದ ವರೆಗಿನ ಸೈಕ್ಲೋಥಾನ್ ರ್ಯಾಲಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಚಾಲನೆ ನೀಡಿದರು.

ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ಅರಣ್ಯ ಭವನದಿಂದ ಹೊರಟ ಸೈಕಲ್ ಯಾತ್ರೆ 9.30 ಗಂಟೆಗೆ ಕಾಕನಕೊಟ್ಟೆಯ ದಮ್ಮನಕಟ್ಟೆಗೆ ತಲುಪಿತು. 50ಕ್ಕೂ ಹೆಚ್ಚು
ಉತ್ಸಾಹಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ರ್ಯಾಲಿಗೂ ಮುನ್ನ ಡಿಸಿಎಫ್ ಡಿ.ಮಹೇಶ್ ಕುಮಾರ್ ಯಾತ್ರೆ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾಕ್ರಮಗಳು ಹಾಗೂ ಉದ್ದೇಶ ಕುರಿತು ವಿವರಿಸಿದರು.

ಎಲ್ಲಾ ಸೈಕಲ್ ಸವಾರನ್ನು ಸಫಾರಿಗೆ ಕರೆದುಕೊಂಡು ಹೋಗಲಾಯಿತು. ಕಾಕನಕೋಟೆಯಲ್ಲಿ ವನ್ಯಜೀವಿ ಬಗ್ಗೆ ಉಪನ್ಯಾಸ ಏರ್ಪಡಿಸಿ, ಪ್ರಮಾಣ ಪತ್ರ ನೀಡಲಾಯಿತು.

ನೆಹರೂ ಯುವ ಕೇಂದ್ರದ ರಾಜ್ಯ ನಿರ್ದೇಶಕ ಅತುಲ್ ನಿಕ್ಕಂ, ಮೈಸೂರು ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಸಿ.ಪ್ರಶಾಂತ್ ಕುಮಾರ್, ಎಸಿಎಫ್ ಮಹದೇವ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.