ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

Published 13 ಜೂನ್ 2024, 15:57 IST
Last Updated 13 ಜೂನ್ 2024, 15:57 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಬೋರ್‌ ವೆಲ್‌ ಚಾಲನೆ ಮಾಡಲು ಸ್ಟಾರ್ಟರ್ ಬಟನ್ ಒತ್ತುವಾಗ ವಿದ್ಯುತ್ ಪ್ರವಹಿಸಿ ಕೆ.ಗಾಯತ್ರಿ (56) ಮಹಿಳೆ ಗುರುವಾರ ಮೃತಪಟ್ಟರು.

ಮೃತ ಮಹಿಳೆ ತಾಲ್ಲೂಕಿನ ಹಬಟೂರು ಕೆಂಪೇಗೌಡನ ಕೊಪ್ಪಲಿನ ಎಚ್.ಎಸ್.ಕೃಷ್ಣೆಗೌಡರ ಪತ್ನಿ. ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮನೆಯ ಹಿಂಭಾಗದಲ್ಲಿದ್ದ ಬೋರ್ ವೆಲ್‌ ಸ್ಟಾರ್ಟರ್ ಬಾಕ್ಸ್ ಸ್ವಿಚ್ ಹಾಕಲು ಮುಂದಾದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಮೀನಿಗೆ ತೆರಳಿದ್ದ ಪತಿ ಕೃಷ್ಣೆಗೌಡ ಸ್ಥಳಕ್ಕೆ ಬಂದು ಗಮನಿಸಿದಾಗ ಸ್ಟಾರ್ಟರ್ ಬಾಕ್ಸ್ ಬಳಿ ಗಾಯತ್ರಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮೃತರ ಮಗ ಸಾಗರ್ ದೂರು ದಾಖಲಿಸಿದ್ದಾರೆ. ಸಂಜೆ ಮೃತರ ಅಂತ್ಯಕ್ರಿಯೆ ಗ್ರಾಮದಲ್ಲಿ ನೆರೆವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT