ನಂಜನಗೂಡು: ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಭಾನುವಾರ ಶಾಸಕ ಯತೀಂದ್ರ ಸಿದ್ದರಾಮಯ್ಯ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು.
‘ಗ್ರಾಮಸ್ಥರ ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ, ಉತ್ತಮ ಆಹಾರದ ಜೊತೆಗೆ ಶುದ್ದವಾದ ನೀರನ್ನು ಸೇವಿಸಿದರೆ ಸಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲಾಗುವುದು. ಗ್ರಾಮಸ್ಥರ ಬೇಡಿಕೆಯಂತೆ ತಗಡೂರು ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಎಸ್.ಸಿ.ಬಸವರಾಜು, ಹಾಡ್ಯ ರಂಗಸ್ವಾಮಿ, ಚಂದ್ರವತಿ ಬಸವರಾಜ್, ಗುರುಮಲ್ಲೇಶ್, ಚಿಕ್ಕಸ್ವಾಮಿ, ಸಂಪತ್, ಸಂಗೀತ, ಸರಸ್ವತಿ, ಮುದ್ದುಮಾದಶೆಟ್ಟಿ, ಕುಮಾರ್, ಬಸವಣ್ಣ ಉಪಸ್ಥಿತರಿದ್ದರು.