ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ‘ಗೃಹಲಕ್ಷ್ಮಿ‘ ಫಲಾನುಭವಿಗಳೆಲ್ಲರಿಗೂ ಹಣ: ಯತೀಂದ್ರ ಸಿದ್ದರಾಮಯ್ಯ

Published 21 ನವೆಂಬರ್ 2023, 6:28 IST
Last Updated 21 ನವೆಂಬರ್ 2023, 6:28 IST
ಅಕ್ಷರ ಗಾತ್ರ

ಮೈಸೂರು: ‘ಗೃಹಲಕ್ಷ್ಮಿ ಯೋಜನೆಗೆ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿದೆ. ಸರ್ಕಾರ ಯೋಜನೆ ಪ್ರಾರಂಭಿಸಿದ ದಿನದಿಂದಲೂ ಪ್ರತಿಯೊಬ್ಬರ ಖಾತೆಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಇದರ ಬಗ್ಗೆ ಯಾವುದೇ ಆತಂಕ ಬೇಡ’ ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ವರುಣ ಕ್ಷೇತ್ರದ ಎಸ್. ಉತ್ತನಹಳ್ಳಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

‘ಈ ಗ್ರಾಮದಲ್ಲಿ ಕಂದಾಯ ಇಲಾಖೆಯ ಸಮಸ್ಯೆಗಳು ಬಹಳ ಇವೆ. ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಮಶಾನ ಅಭಿವೃದ್ಧಿ, ರಿಂಗ್ ರಸ್ತೆಯಿಂದ ದೇವಸ್ಥಾನದವರೆಗೆ ಜೋಡಿ ರಸ್ತೆ, ಪಶು ಆಸ್ಪತ್ರೆ ಸ್ಥಳಾಂತರ, ಪ್ರೌಢಶಾಲೆ, ಕುಂಬಾರ ಭವನ, ವಿಶ್ವಕರ್ಮ ಭವನಕ್ಕೆ ಹಣ ಬಿಡುಗಡೆ ಹಾಗೂ ಪ್ರಸಾದ್ ಯೋಜನೆಯಡಿ ದೇವಸ್ಥಾನವನ್ನು ಸೇರಿಸಿ ಅಭಿವೃದ್ಧಿಪಡಿಸಬೇಕು, ಕನಕಭವನಕ್ಕೆ ಆರ್‌ಟಿಸಿ ಆಗಬೇಕು, ಆಶ್ರಯ ಮನೆಗಳಿಗೆ ಸಕ್ರಮ ಆಗಬೇಕು ಎಂದು ಒತ್ತಾಯಿಸಿದ್ದೀರಿ. ಕುಡಿಯುವ ನೀರಿನ ಬಗ್ಗೆ ಹಲವು ಸಮಸ್ಯೆಗಳನ್ನು ತಿಳಿಸಿದ್ದೀರಿ. ಈ ಎಲ್ಲಾ ಸಮಸ್ಯೆಗಳನ್ನು ಒಂದೇ ಬಾರಿ ಮಾಡಲು ಆಗದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಆದ್ಯತೆ ಮೇಲೆ ಸಮಸ್ಯೆಗಳನ್ನು ಬಗೆಹರಿಸಿಕೊಡಲಾಗುವುದು’ ಎಂದು ತಿಳಿಸಿದರು.

ಕಾರ್ಗಳ್ಳಿಯಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಮುಖ್ಯಮಂತ್ರಿ ವಿಶೇಷಾಧಿಕಾರಿ ಕೆ.ಎನ್. ವಿಜಯ್, ತಹಶೀಲ್ದಾರ್‌ ಜೆ.ಮಹೇಶ್‍ ಕುಮಾರ್, ಬಿಇಒ ವಿವೇಕಾನಂದ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಎಸ್‌ಐ ಚೇತನ್, ಆರ್‌ಐ ಶಂಕರ್, ಆಪ್ತ ಸಹಾಯಕ ಶಿವಸ್ವಾಮಿ, ಪ್ರದೀಪ್‍ ಕುಮಾರ್, ನಾಗರಾಜು, ಮುಖಂಡರಾದ ಬುಲೆಟ್ ರೇವಣ್ಣ, ರಂಗಸ್ವಾಮಿ, ಶಿವಬೀರ, ಬಸಪ್ಪ, ರಾಜು, ಶಿವಣ್ಣ, ಬೀರಪ್ಪ, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT