ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗಾಸನದಿಂದ ಆರೋಗ್ಯ ವೃದ್ಧಿ: ಗಣಪತಿ ಶ್ರೀ

Published 21 ಜೂನ್ 2024, 12:54 IST
Last Updated 21 ಜೂನ್ 2024, 12:54 IST
ಅಕ್ಷರ ಗಾತ್ರ

ಮೈಸೂರು: ‘ಪ್ರತಿ ನಿತ್ಯ ಯೋಗಾಸನ ಹಾಗೂ 40 ನಿಮಿಷ ಧ್ಯಾನ ಮಾಡಿದರೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತ್ಯುತ್ತಮವಾಗಿರುತ್ತದೆ’ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದ ನಾದ ಮಂಟಪದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಮಕ್ಕಳೊಂದಿಗೆ ಯೋಗಾಸನ ಮಾಡಿದ ನಂತರ ಅವರು ಮಾತನಾಡಿದರು.

‘ಯೋಗ–ಧ್ಯಾನದಿಂದ ಆಗುವ ಅನುಭವ ಅದ್ಭುತವಾದುದು. ಅದನ್ನು ಯಾರೂ ತಪ್ಪಿಸಿಕೊಳ್ಳಬಾರದು. ನಮಗಾಗಿ ಸಮಯ ಮೀಸಲಿಡಬೇಕು. ಧ್ಯಾನ ಮಾಡುವಾಗ ಮುಖದಲ್ಲಿ ನಗು ಇರಬೇಕು. ಕೋಪ, ಹಸಿವು ತೋರಬಾರದು. ಬೇರೆ ಯಾವುದೇ ಯೋಚನೆಯನ್ನು ಮಾಡಬಾರದು. ಯಾವ ಕೆಟ್ಟ ಶಬ್ದವನ್ನಾಗಲಿ ಅಥವಾ ಹಾಡು, ಮಾತುಗಳನ್ನು ಆಲಿಸದೆ ತದೇಕಚಿತ್ತರಾಗಿ ಧ್ಯಾನಿಸಬೇಕು’ ಎಂದು ಸಲಹೆ ನೀಡಿದರು.

ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಿಶೇಷ ಮಕ್ಕಳು ಪಾಲ್ಗೊಂಡು ಯೋಗಭ್ಯಾಸ ಮಾಡಿದ್ದು ವಿಶೇಷವಾಗಿತ್ತು.

ಅವಧೂತ ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT