ಹುಣಸೂರು ನಗರದ ಪ್ರಮುಖ ರಸ್ತೆಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಕುರಿತ ಸ್ತಬ್ದ ಚಿತ್ರ ಮತ್ತು ಜಾನಪದ ಕಲಾತಂಡದೊಂದಿಗೆ ಸಮುದಾಯದವರು ಬೃಹತ್ ಮೆರವಣಿಗೆಯಲ್ಲಿ ಬುಧವಾರ ಭಾಗವಹಿಸಿದ್ದರು.
ರಾಜ್ಯದಾದ್ಯಂತ ರಸ್ತೆ ಗುಂಡಿ ಬಿದ್ದಿದ್ದು ಡಿಸೆಂಬರ್ ನಂತರದಲ್ಲಿ ಎಲ್ಲಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ಅನುದಾನ ಸಮೇತ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿ ಗುಂಡಿಮುಕ್ತ ರಸ್ತೆಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ
ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ
‘ಹೂಮಾಲೆ ಬಿಡಿ ಪುಸ್ತಕ ಕೊಡಿ’
ಕಾರ್ಯಕ್ರಮಗಳಲ್ಲಿ ಹೂಮಾಲೆ ಹಾಕುವ ಬದಲಿಗೆ ಜ್ಞಾನ ವೃದ್ಧಿಗೆ ಪೂರಕವಾದ ಪುಸ್ತಕವನ್ನು ಕೊಡುವ ದಿಕ್ಕಿನಲ್ಲಿ ಬದಲಾವಣೆಯಾಗಿ ಹೂ ಒಂದು ದಿನಕ್ಕೆ ಅದರ ಶಕ್ತಿ ಮುಗಿಯುತ್ತದೆ ಆದರೆ ಪುಸ್ತಕ ನಮ್ಮ ಜೀವ ಇರುವವರೆಗೂ ಜ್ಞಾನ ಶಕ್ತಿ ನೀಡುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆಗೆ ವಿರೋಧ
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಆರಂಭಿಸಿದ್ದಾರೆ. ಈ ಚರ್ಚೆಗೆ ನಾಯಕ ಸಮುದಾಯ ವಿರೋಧವಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ಜಾತಿ ಸಮೀಕ್ಷೆ ನಡೆಸಿ ಶೇಕಡವಾರು ಆಧರಿಸಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಕ್ರಮವಹಿಸಲಿ ಆದರೆ ಪ್ರಸ್ತುತ ಇರುವ ಮೀಸಲಾತಿಗೆ ಕುರುಬ ಸಮಾಜ ಸೇರಿಸುವುದು ಸರಿಯಲ್ಲ ಎಂದು ವಿ.ಎಸ್.ಉಗ್ರಪ್ಪ ಗುಡುಗಿದರು.