ಪಿರಿಯಾಪಟ್ಟಣ: ‘ಜಿಲ್ಲೆಯಾದ್ಯಂತ ಈ ಬಾರಿ ಜಲಶುದ್ಧೀಕರಣಕ್ಕೆ ಚಾಲನೆ ನೀಡುವ ಮೂಲಕ ಜಲ ಕಾಂತ್ರಿಗೆ ನಾಂದಿ ಹಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮ್‌ದಾಸ್ ತಿಳಿಸಿದರು. ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಸತಿ ಗೃಹದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ‘ಗ್ರಾಮೀಣ ಪ್ರದೇಶದಲ್ಲಿ ತಳಮಟ್ಟ ದಲ್ಲಿರುವ ಅಶುದ್ಧ ಕುಡಿಯುವ ನೀರಿನಿಂದ ಹಲವಾರು ರೋಗಗಳು ಬರುತ್ತಿವೆ ಎಂಬುದು ಸಂಶೋಧನೆ ಯಿಂದ ಧೃಡಪಟ್ಟಿದೆ. ಈ ಬಾರಿ ಕ್ರಿಯಾ ಯೋಜನೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಜಲ ಮಟ್ಟವನ್ನು ಮೇಲೆ ತ್ತುವ ಸಲುವಾಗಿ ಯೋಜನೆಗಳನ್ನು ರೂಪಿಸಿ ಅದಕ್ಕೆ ಅಗತ್ಯವಾದ ಹಣ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಪಕ್ಷಾತೀತ ಮತ್ತು ಸಮಾಜಮುಖಿ ಮನಸ್ಸುಳ್ಳ ಎಲ್ಲ ವರ್ಗದವರು ಸೇರಿಸಿ ಆಸ್ಪತ್ರೆ ಅಭಿವೃದ್ಧಿ ಸಮಿತಿ ರಚಿಸಿ. ಸಮಿತಿಯ ಮೂಲಕ ಆಸ್ಪತ್ರೆಯ ನಿರ್ವಹಣೆ ಮತ್ತು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿ ದರು. ಶಿಕ್ಷಣ ವ್ಯಾಪಾರೀಕರಣ ವಾಗು ತ್ತಿದೆ ಎಂಬುದನ್ನು ಒಪ್ಪಿಕೊಳ್ಳ ಬೇಕಾ ಗಿದೆ. ಹೆಚ್ಚಿನ ಹಣಕೊಟ್ಟು ಪದವಿ ಪಡೆದ ವೈದ್ಯರಿಂದ ಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ಬಾರಿ ಸ್ನಾತಕೋತ್ತರ ಪದವಿಗೆ ಹೆಚ್ಚುವರಿ ಸೀಟುಗಳನ್ನು ನೀಡಲಾಗುತ್ತಿದೆ. ಅಲ್ಲದೆ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ. ಕುಪ್ಪೆ ಗ್ರಾಮವನ್ನು ದತ್ತು ಪಡೆದು ಮಾದರಿ ಆರೋಗ್ಯ ಗ್ರಾಮವನ್ನಾ ಗಿಸಲು ಸಂಘ ಸಂಸ್ಥೆಗಳ ಸಹಾಯ ಪಡೆಯಲಾಗಿದೆ’ ಎಂದು ತಿಳಿಸಿದರು.

ಶಾಸಕ ಕೆ.ವೆಂಕಟೇಶ್ ಮಾತನಾಡಿ, ಬಿಜೆಪಿ ಸರ್ಕಾರ ಇತರೆ ಪಕ್ಷಗಳ ಶಾಸಕರನ್ನು ಹೊರ ರಾಜ್ಯದ ಶಾಸಕರಂತೆ ಕಾಣುತ್ತಿದ್ದು ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು. ಉಸ್ತುವಾರಿ ಸಚಿವರಾದ ನೀವು ಈ ರೀತಿ ಮಾಡಬೇಡಿ. ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಿ’ ಎಂದರು. ‘ತಾಲ್ಲೂ ಕಿನಲ್ಲಿ ಪ್ರಮುಖ ರಸ್ತೆಗಳು ಹಾಳಾಗಿದ್ದು ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಬಾರಿ ಸಚಿವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿ ದರು. ಉಸ್ತುವಾರಿ ಸಚಿವರು ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿ ಸಬೇಕು’ ಎಂದು ತಿಳಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಜಿ.ಪಂ. ಸದಸ್ಯೆ ಕಾವೇರಿ ಶೇಖರ್, ತಾ.ಪಂ. ಸದಸ್ಯ ಮಹದೇವ್, ಗ್ರಾ.ಪಂ. ಅಧ್ಯಕ್ಷ ಮಕ್ಬೂಲ್ ಷರೀಫ್, ಉಪಾಧ್ಯಕ್ಷೆ ರಾಣಿ, ಜಿ.ಪಂ. ಯೋಜನಾಧಿಕಾರಿ ಗೋಪಾಲ್, ಡಿಎಚ್‌ಓ ಡಾ.ರಾಜು, ಟಿಎಚ್‌ಓ ಡಾ.ಶಶಿಕಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.