ಮೈಸೂರು: `ರಾಜ್ಯದ ಕಾರಾಗೃಹಗಳ ಕೈದಿಗಳಿಗೆ ನೀಡುತ್ತಿರುವ ದಿನಗೂಲಿ ಯನ್ನು ಹೆಚ್ಚಳ ಮಾಡಲಾಗುವುದು~ ಎಂದು ಬಂದಿಖಾನೆ ಎಡಿಜಿಪಿ ಎ.ವಿ.ಗಗನ್ದೀಪ್ ತಿಳಿಸಿದರು.

ನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ ಸೋಮವಾರ ಬೇಕರಿ ಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, `ಕಾರಾಗೃಹ ವಾಸಿಗಳು ವಿವಿಧ ಉತ್ಪನ್ನ ಗಳನ್ನು ತಯಾರು ಮಾಡುತ್ತಾರೆ. ಇವರಿಗೆ ನಿತ್ಯ ರೂ.40 ರಿಂದ ರೂ.50 ದಿನಗೂಲಿ ರೂಪದಲ್ಲಿ ನೀಡಲಾ ಗುತ್ತಿತ್ತು. ಇನ್ನು ಮುಂದೆ ರೂ.50 ರಿಂದ ರೂ.60 ನೀಡಲಾಗುವುದು~ ಎಂದು ತಿಳಿಸಿದರು.

`ರಾಜಧಾನಿ ಬೆಂಗಳೂರಿನ ಕಾರಾಗೃಹ ವಾಸಿಗಳು ತಯಾರು ಮಾಡಿದ ಬೇಕರಿ ಉತ್ಪನ್ನ ಗಳನ್ನು ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಬೆಳಗಾವಿ, ಶಿವಮೊಗ್ಗ, ಧಾರವಾಡ ಮತ್ತು ಬಳ್ಳಾರಿಯಲ್ಲಿ ಈಗಾಗಲೇ ಬೇಕರಿ ಆರಂಭಿ ಸಲಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಇದೇ ಮೊದಲ ಬಾರಿಗೆ ಬೇಕರಿ ಆರಂಭಿಸಲಾಗಿದ್ದು, ಬ್ರೆಡ್, ಕೇಕ್ಗಳು, ಬಿಸ್ಕತ್ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕಾರಾಗೃಹ ವಾಸಿಗಳು ತಯಾರು ಮಾಡಲಿದ್ದಾರೆ. ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ಕಡಿಮೆ ಬೆಲೆಗೆ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು~ ಎಂದು ತಿಳಿಸಿದರು.

`500 ಬ್ರೆಡ್, 1 ಸಾವಿರ ಕೇಕ್ಗಳನ್ನು ನಿತ್ಯ ತಯಾರು ಮಾಡಲಾಗು ವುದು. ಬೇಕರಿ ಉತ್ಪನ್ನ ತಯಾರು ಮಾಡಲು ಅಗತ್ಯ ಯಂತ್ರೋ ಪಕರಣ ಗಳನ್ನು ನೀಡಲಾಗಿದೆ. ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುವ ಜೊತೆಗೆ ವಿವಿಧ ಉತ್ಪನ್ನಗಳ ತಯಾರಿಕೆ ಬಗ್ಗೆ ಕೈದಿಗಳಿಗೆ ತರಬೇತಿ ನೀಡುವುದರಿಂದ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸ್ವ- ಉದ್ಯೋಗ ಆರಂಭಿಸಲು ಸಹಕಾರಿ ಯಾಗುತ್ತದೆ~ ಎಂದು ತಿಳಿಸಿದರು.

ರೂ.2 ಕೋಟಿ ಬಿಡುಗಡೆ: `ಕೈಗಾ ರಿಕಾ ಉತ್ಪನ್ನಗಳನ್ನು ತಯಾರಿ ಸುವ ಸಲುವಾಗಿ ರಾಜ್ಯ ಸರ್ಕಾರ ರೂ.2 ಕೋಟಿ ಅನುದಾನ ನೀಡಿದೆ. ಈ ಹಣ ದಲ್ಲಿ ಬಟ್ಟೆ ತಯಾರಿಕೆ ಮತ್ತು ಮುದ್ರ ಣಕ್ಕೆ ಬೇಕಾದ ಯಂತ್ರೋಪ ಕರಣ ಖರೀದಿಸಲು ಬಳಸಿಕೊಳ್ಳಲಾಗು ವುದು. ಈಗಾಗಲೇ ಬಹುತೇಕ ಕಾರಾ ಗೃಹಗಳಲ್ಲಿ ಹಂದಿ, ಕುರಿ ಸಾಕಾಣಿಕೆ, ಟೈಲರಿಂಗ್, ಕಂಪ್ಯೂಟರ್ ತರಬೇತಿ ಸಹ ನೀಡಲಾಗುತ್ತಿದೆ~ ಎಂದರು.

`ಬೆಂಗಳೂರಿನಲ್ಲಿ 4,400 ಕೈದಿಗಳು ಇದ್ದರು. ಪ್ರಸ್ತುತ 3,500 ಕೈದಿಗಳು ಮಾತ್ರ ಇದ್ದಾರೆ. 500 ಕೈದಿಗಳನ್ನು ಬಳ್ಳಾರಿ, ಗುಲ್ಬರ್ಗ ಸೇರಿದಂತೆ ವಿವಿಧೆಡೆ ಸ್ಥಳಾಂತರ ಮಾಡಲಾಗಿದೆ. ಮೈಸೂರು ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚು ಇದೆ. ಆದರೆ ಕಾರಾಗೃಹವನ್ನು ಬೇರೆಡೆ ಸ್ಥಳಾಂತರ ಮಾಡುವ ಚಿಂತನೆ ಇಲ್ಲ. ಈಗಿರುವ ಸ್ಥಳದಲ್ಲೇ ಇರಲಿದೆ. 450 ಗಾರ್ಡ್ಗಳನ್ನು ನೇಮಕ ಮಾಡ ಲಾಗಿದೆ. ಇವರಿಗೆ ಬೇಕಾದ ಅಗತ್ಯ ತರಬೇತಿಯನ್ನು ನಗರದ ಕಾರಾಗೃಹ ದಲ್ಲೇ ನೀಡಲಾಗುವುದು~ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಬಂದಿಖಾನೆ ಡಿಐಜಿ ಎಂ.ಸಿ. ವಿಶ್ವನಾಥಯ್ಯ, ನಗರ ಕೇಂದ್ರ ಕಾರಾಗೃಹ ಮುಖ್ಯ ಸೂಪರಿಂಟೆಂ ಡೆಂಟ್ ಜಯಸಿಂಹ ಇದ್ದರು.

ಮೊದಲ ದಿನವೇ ಭರ್ಜರಿ ಮಾರಾಟ

ಮೈಸೂರು: ನಗರದ ಕೇಂದ್ರ ಕಾರಾಗೃಹ ಆವರಣದಲ್ಲಿ ಸೋಮವಾರ ಆರಂಭವಾದ ಬೇಕರಿಯಲ್ಲಿ ತಿಂಡಿ-ತಿನಿಸುಗಳನ್ನು ಕೊಳ್ಳಲು ಜನ ಮೊದಲ ದಿನವೇ ಮುಗಿ ಬಿದ್ದರು. ಬ್ರೆಡ್, ವಿವಿಧ ಬಗೆಯ ಕೇಕ್ಗಳು, ಖಾರ-ಬೆಣ್ಣೆ ಬಿಸ್ಕತ್, ಪಪ್ಸ್ಗಳು ಬಿಕರಿಯಾ ಗುತ್ತಿದ್ದವು. ಇವುಗಳನ್ನು ಕೊಳ್ಳಲು ಜನರು ಸರತಿಯಲ್ಲಿ ನಿಂತಿದ್ದರು. ಬೇಕರಿಯಲ್ಲಿ ತಿನಿಸುಗಳನ್ನು ಕೊಂಡು ಅಲ್ಲೇ ಸವಿಯುತ್ತಿದ್ದ ಜನರು ಕೈದಿಗಳ ಕೈರುಚಿ ಚೆನ್ನಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.