ತಿ.ನರಸೀಪುರ: ಸರ್ವ ಶಿಕ್ಷಣ ಅಭಿಯಾನದಡಿ ಜನರಿಗೆ ಶೈಕ್ಷಣಿಕ ಅರಿವು ಮೂಡಿಸಲು ಸಮುದಾಯ ಜಾಗೃತಿ ಕಾರ್ಯಕ್ರಮ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ಮತ್ತು ಸೈಕಲ್ ಜಾಥಾಕ್ಕೆ ಪಟ್ಟ ಣದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಾಕಾಧಿಕಾರಿ ಚಿಕ್ಕಲಿಂಗಯ್ಯ ಹಾಗೂ ವೃತ್ತ ನಿರೀಕ್ಷಕ ಜಿ.ಎಸ್.ಗಜೇಂದ್ರಪ್ರಸಾದ್ ಹಸಿರು ನಿಶಾನೆ ತೋರುವ ಚಾಲನೆ ನೀಡಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ತಿ.ನರಸೀಪುರ ತಾಲ್ಲೂಕಿನಲ್ಲಿ ಸೈಕಲ್ ಜಾಥಾ ಮತ್ತು ಮ್ಯಾರಥಾನ್ ಮೂಲಕ ಜಾಗೃತಿ ಕಾರ್ಯಕ್ರಮ ವನ್ನು ಶಿಕ್ಷಣ ಇಲಾಖೆ ಹಮ್ಮಿ ಕೊಂಡಿತ್ತು. ತಾಲ್ಲೂಕಿನ ವಿವಿಧ ಪ್ರಾಥಮಿಕ ಶಾಲೆಗಳಿಂದ ಬಂದಿದ್ದ 500 ಕ್ಕೂ ಅಧಿಕ ಮಕ್ಕಳು ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಿಂದ ತಿರಮಕೂಡಲಿನವರೆಗೆ ಈ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು. ನಂತರ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಸೈಕಲ್ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಆ ನಂತರ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಮಹಾದೇವಮ್ಮ, ‘ಶಿಕ್ಷಣ ಇಲಾಖೆ ಎಸ್ಎಸ್ಎ ಯೋಜನೆಯಡಿ ಶೈಕ್ಷಣಿಕವಾಗಿ ಮಾಹಿತಿ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳ ಲಾದ ಓಟದಲ್ಲಿ ಸಾಕಷ್ಟು ವಿದ್ಯಾರ್ಥಿ ಗಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ’ ಎಂದರು.

ಓಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ತಾ.ಪಂ ಉಪಾಧ್ಯಕ್ಷ ಸಿ.ವೆಂಕಟೇಶ್, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಯಾವುದೇ ಕಾರ್ಯಕ್ರಮಕ್ಕೆ ತಾ.ಪಂ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಾಗೇಂದ್ರಸಿಂಗ್, ದೈಹಿಕ ಶಿಕ್ಷಣ ತಾಲ್ಲೂಕು ಸಂಯೋಜನಾಧಿಕಾರಿ ಸಂಪತ್ ದೊರೈರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಗಂಗಾಧರ್, ಸಂಯೋಜನಾಧಿಕಾರಿ ಎಚ್.ಎಂ.ಶಂಕರ್, ಸರ್ಕಾರಿ ನೌಕರರ ಸಂಘದ ಕಾರ್ಯ ದರ್ಶಿ ಡಿ.ಸುರೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜಿ. ಆನಂದ್, ಪಿಎಸ್ಐ ಜಗದೀಶ್, ಕ.ಪು.ಮಹಾದೇವಸ್ವಾಮಿ. ರಾಜೇಂದ್ರಪ್ರಸಾದ್, ತಾಲ್ಲೂಕಿನ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.

ಮ್ಯಾರಾಥಾನ್ ವಿಜೇತರು
ಸಮುದಾಯ ಜಾಗೃತಿ ಕಾರ್ಯಕ್ರಮದಡಿ ನಡೆದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಈ ಕೆಳಕಂಡ ವಿದ್ಯಾರ್ಥಿ ಗಳು ವಿಜೇತರಾಗಿದ್ದಾರೆ.
ಬಾಲಕರ ವಿಭಾಗ : ಮಹಾದೇವ ಸ್ವಾಮಿ, ನಾಗ, (ವಿದ್ಯೋದಯ ಪ್ರೌಢಶಾಲೆ), ತ್ರಿನೇತ್ರ, ಪ್ರಮೋದ್, ಮನೋಜ್ (ಸರ್ಕಾರಿ ಪ್ರೌಢಶಾಲೆ)
ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ನಿಂಗರಾಜು, ಮಲ್ಲೇಶ್ (ಕುರುಬೂರು ವಿದ್ಯಾ ದರ್ಶಿನಿ ಕಾನ್ವೆಂಟ್), ರಾಹುಲ್, ಅಭಿಷೇಕ್, ಚೇತನ್(ಲಿಟಲ್ ಫ್ಲವರ್)
ಬಾಲಕಿಯರ ವಿಭಾಗ : ಮಂಜುಳಾ (ವಿದ್ಯೋದಯ), ರಂಜಿತಾ, ಲಕ್ಷ್ಮೀ, ಮಾಧುರಿ, ನಿರೋಷಾ, (ಸರ್ಕಾರಿ ಬಾಲಕಿಯರ ಪ್ರೌಢಶಾಲೆ)
ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಬಾಲಕಿಯರು: ಮೇಘಶ್ರೀ, ಸಹನಾ, ಸಿಂಧೂ, (ಕುರುಬೂರು ವಿದ್ಯಾ ದರ್ಶಿನಿ ಕಾನ್ವೆಂಟ್), ವೀಣಾ (ಆದರ್ಶ ವಿದ್ಯಾಲಯ, ಸೋಸಲೆ) ಚಂದನ (ಸರ್ಕಾರಿ ಪ್ರಾಥಮಿಕ ಶಾಲೆ ರಂಗಸಮುದ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.