ತಿ.ನರಸೀಪುರ: ತಾಲ್ಲೂಕಿನಲ್ಲಿ ನಿವೃತ್ತ ನೌಕರರು ನಿವೃತ್ತಿ ಬಳಿಕವೂ ಕ್ರಿಯಾಶೀಲರಾಗಿ ಸಂಘಟಿತರಾಗಿರುವುದು ಶ್ಲಾಘನೀಯ. ಈ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನ ದೊರಕಿಸುವುದಾಗಿ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ಭರವಸೆ ನೀಡಿದರು.

ಪಟ್ಟಣದ ಗುರು ಭವನದಲ್ಲಿ ಮಂಗಳವಾರ ನಡೆದ ನಿವೃತ್ತ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹತ್ತು ಹಲವು ಸಮಸ್ಯೆಗಳ ನಡುವೆಯೂ ಸರ್ಕಾರಿ ನೌಕರಿಯನ್ನು ನಿಭಾಯಿಸಿ, ನಿವೃತ್ತರಾಗುವ ನೌಕರರು ತಮ್ಮ ಸೇವಾ ಅವಧಿಯಲ್ಲಿನ ಉತ್ತಮ ಕೆಲಸಗಳಿಂದ ತೃಪ್ತರಾಗಿರುತ್ತಾರೆ. ಅವು ಮನದಲ್ಲಿ ಪುನರಾವರ್ತಿತವಾಗಿ ಸಮಾಜಮುಖಿಗಳಂತೆ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ ಮಾತನಾಡಿದರು. ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ನಿವೃತ್ತ ನೌಕರರ ದಿನಾಚರಣೆ ಅಂಗವಾಗಿ ಜಯಶಂಕರಪ್ಪ, ಗುರುಸ್ವಾಮಿ ಹಾಗೂ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಬೆಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಎಚ್.ಎಸ್. ಅರುಣಪ್ರಭ, ಬಿಆರ್‌ಸಿ ಕೃಷ್ಣಪ್ಪ, ಸಂಘದ ಜಿಲ್ಲಾ ಖಜಾಂಚಿ ಮನೋನ್ಮಣಿ, ತಾಲ್ಲೂಕು ಕಾರ್ಯದರ್ಶಿ ಎಸ್.ವೆಂಕಟರಮಣ, ಖಜಾಂಚಿ ಜೆ.ಸಿದ್ದೇಗೌಡ, ಉಪಾಧ್ಯಕ್ಷರಾದ ಎಂ.ಮಹದೇವಯ್ಯ, ಪಿ.ಬಸವಣ್ಣ, ಎಂ.ಆರ್. ಪ್ರಭಾಮಣಿ, ಕಾನೂನು ಸಲಹೆಗಾರ ಕೆ.ಪಿ. ಬಸವಣ್ಣ, ಸಹ ಕಾರ್ಯದರ್ಶಿ ಎಂ.ಗೋವಿಂದರಾಜು, ಬಿ.ಎಲ್. ಶಿವಶಂಕರ್,ಕೆ.ಕೆಂಚಪ್ಪ, ಎನ್.ಪಿ. ರಾಮು, ಬಿ.ವಿಜಯಕುಮಾರ್, ಸಿ.ಲಿಂಗಯ್ಯ, ಪಿ.ರಂಗಸ್ವಾಮಿ, ಎಸ್.ಶಿವಣ್ಣ, ಎಂ.ಜವನಯ್ಯ, ಟಿ.ರಂಗೇಗೌಡ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.