ಕೆ.ಆರ್.ನಗರ: `ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯ ಮಾಡಿ ಎಂದು ಹೇಳಿಲ್ಲ~ ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಭಾನುವಾರ ಇಲ್ಲಿ ಸ್ಪಷ್ಟಪಡಿಸಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೆ.ಆರ್.ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ನಾನು 5ನೇ ತರಗತಿಯಿಂದಲೇ ಆರ್ಎಸ್ಎಸ್ನಲ್ಲಿ ಬೆಳೆದವನು. ಅಖಂಡ ಭಾರತದ ಕನಸು ಹೊತ್ತವನು. ಕೊಡಗು ಪ್ರತ್ಯೇಕತೆಯ ವಿರುದ್ಧ ಹೋರಾಡಿದವನು. ಇಂತಹ ಸಂದರ್ಭದಲ್ಲಿ ನಾನು ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯ ಮಾಡಿ ಎಂದು ಹೇಳಲು ಸಾಧ್ಯವೇ~ ಎಂದು ಪ್ರಶ್ನಿಸಿದರು.

`ರಾಜ್ಯಕ್ಕೊಂದು ಕಾನೂನು ಕೊಡಗು ಜಿಲ್ಲೆಗೆ ಒಂದು ಕಾನೂನು ಮಾಡುವುದು ಬೇಡ. ನಮ್ಮ ಜಿಲ್ಲೆಗೆ ಅನ್ಯಾಯವಾದಾಗ ಸುಮ್ಮನಿರಲೂ ಸಾಧ್ಯವಿಲ್ಲ. ಜುಲೈ19ರಂದು ಪತ್ರಿಕೆಗಳಲ್ಲಿ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ~ ಎಂದರು.

ಶಾಸಕ ಸಾ.ರಾ.ಮಹೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ಪಕ್ಷದ ವಕ್ತಾರ ಕೆ.ಎಲ್.ರಮೇಶ್, ಆನಂದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.