ಮೈಸೂರು: ಮಾಮರವೆಲ್ಲೋ ಕೋಗಿಲೆಯಲ್ಲೋ ಏನಿ ಸ್ನೇಹ ಸಂಬಂಧ? ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ, ಮಡಿಕೇರಿ ಸಿಪಾಯಿ ಗೀತೆಗಳನ್ನು ಗಾಯಕರು ಹಾಡುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಶಿಳ್ಳೆ, ಚಪ್ಪಾಳೆ ಮಾರ್ದನಿಸಿತು.

ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ನಟ ಡಾ.ವಿಷ್ಣು ವರ್ಧನ ಹಿಟ್ಸ್ ರಸಮಂಜರಿ ಕಾರ್ಯಕ್ರಮದಲ್ಲಿ ವಿಷ್ಣು ಅಭಿಮಾನಿಗಳು ಕುಣಿದು, ಕುಪ್ಪಳಿಸಿದರು.

ಹಿರಿಯ ನಟ ದಿವಂಗತ ರತ್ನಾಕರ ಅವರ ಪುತ್ರ ರಾಘವೇಂದ್ರ ಹಾಗೂ ಇವರ ಪತ್ನಿ ಡಾ.ಪ್ರೀತಂ ರಾಘವೇಂದ್ರ ಅವರು ವಿಷ್ಣುವರ್ಧನ್ ಅವರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವಿಷ್ಣು ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿದರು.

ಹೊಂಬಿಸಿಲು ಚಿತ್ರದ `ಜೀವವೀಣೆ ನೀನು ಮಿಡಿಯುವ ಸಂಗೀತ~, ಕೃಷ್ಣ ನೀ ಬೇಗನೆ ಬಾರೋ ಚಿತ್ರದ `ಅಲಾರೆ ಅಲಾರೆ ಮುಕುಂದ ಮುರಾರಿ~, `ಶಾರದೆ ದಯೆ ತೋರಿದೆ~, `ಕರ್ನಾಟಕದ ಇತಿಹಾಸ ದಲಿ~, `ಕನ್ನಡನಾಡಿನ ಜೀವನದಿ ಕಾವೇರಿ~ ಹಾಡು ಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು. ವಿಷ್ಣು ಅಭಿನ ಯದ ಆಪ್ತರಕ್ಷಕ ಚಿತ್ರದ ಹೌಲ..ಹೌಲ ಹಾಡಿಗೆ ಸಭಾಂಗಣದ ಹಿಂಭಾಗದಲ್ಲಿ ಕುಳಿತ ಪ್ರೇಕ್ಷಕರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

`ಜಯಸಿಂಹ ಬಂದಾ ಜಯಸಿಂಹ~, `ಬಾರೆ ಸಂತೆಗೆ ಹೋಗೋಣ ಬಾ~, `ನೂರೊಂದು ನೆನಪು ಎದೆಯಾ ಳದಿಂದ ಹಾಡಾಗಿ ಬಂತು~, `ನೀ ಮೀಟಿದಾ ನೆನ ಪೆಲ್ಲವೂ~, `ಬಾರೇ ಬಾರೇ ಚೆಂದದ ಚೆಲುವಿನ ತಾರೆ~ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ಸಭಾಪತಿ ಬಿ.ವಿ.ಶೇಷಾದ್ರಿ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಎಂ.ಎಸ್.ರವೀಂದ್ರ, ರಮೇಶ್, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ್, ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.