ಶುಕ್ರವಾರ, ಜನವರಿ 17, 2020
29 °C

ಮನೆ ನಿರ್ಮಾಣ ವಿಳಂಬಕ್ಕೆ ಕೊಳೆಗೇರಿಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರಧಾನಮಂತ್ರಿಗಳ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ವಿಳಂಬ ಖಂಡಿಸಿ ಕೊಳಚೆ ಪ್ರದೇಶದ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ನಗರಪಾಲಿಕೆ ವ್ಯಾಪ್ತಿಯಲ್ಲಿ 9 ಘೋಷಿತ ಕೊಳಚೆ ಪ್ರದೇಶಗಳಿವೆ. ಕೊಳಚೆ ಪ್ರದೇಶ ಅಭಿವೃದ್ಧಿ ನಿಗಮ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಸುಮಾರು 1,590 ಮನೆಗಳನ್ನು ನಿರ್ಮಾಣ ಮಾಡಲು 2019ರ ಜನವರಿಯಲ್ಲೇ ಆರಂಭ ಮಾಡಲಾಗಿತ್ತು. ಅರ್ಹ ಫಲಾನುಭವಿಗಳೂ ನಿಗದಿತ ಮೊತ್ತ ಪಾವತಿಸಿದ್ದರು. ಒಪ್ಪಂದದ ಪ್ರಕಾರ 6 ತಿಂಗಳ ಒಳಗೆ ಮನೆ ಕಟ್ಟಿಕೊಡಬೇಕಿತ್ತು. ಇದುವರೆಗೂ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ದೂರಿದರು.

ಈಗಾಗಲೇ 12 ತಿಂಗಳ ಅವಧಿ ಮುಗಿದಿದೆ. ಮನೆಗಳಿಗೆ ಗಿಲಾವ್ ಆಗಿಲ್ಲ. ವೈರಿಂಗ್ ಆಗಿಲ್ಲ, ಕಿಟಕಿ, ಬಾಗಿಲುಗಳೂ ಇಲ್ಲ. ನೆಲಹಾಸು ಸಿದ್ದವಾಗಿಲ್ಲ. ಎಲ್ಲ ಮನೆಗಳು ಅಪೂರ್ಣವಾಗಿವೆ. ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ರಮೇಶ್ ಹೆಗ್ಡೆ, ಶಮೀರ್ ಖಾನ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮುಖಂಡರಾದ ಪಂಡಿತ್ ವಿ.ವಿಶ್ವನಾಥ್, ಮಂಜುಳಾ ಶಿವಣ್ಣ, ಶರೀಫ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು