ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪಿಂಚಣಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾವರ್ಕರ್ ವಿರುದ್ಧ ದೊರೆಸ್ವಾಮಿ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಖಂಡನೀಯ. ದೊರೆಸ್ವಾಮಿ ಅವರ ಈಚೆನನಡವಳಿಕೆ ಅವರು ನಿಜವಾಗಿಯೂ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೇ ಎಂಬ ಅನುಮಾನ ಮೂಡಿಸುತ್ತದೆ. ಹಾಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕು. ಪಿಂಚಣಿ ರದ್ದು ಮಾಡಬೇಕು ಎಂದುಆಗ್ರಹಿಸಿದರು.

ಸಾವರ್ಕರ್ ಅವರ ರಾಷ್ಟ್ರಪ್ರೇಮ, ತ್ಯಾಗ, ಬಲಿದಾನ ಕುರಿತು ಹಗುರವಾಗಿ ಮಾತನಾಡುವುದು ದೇಶದ್ರೋಹ.
ಬಾಲ್ಯದಲ್ಲೇ ಮಿತ್ರ ಮೇಳ ಅಭಿನವ ಭಾರತ ಸಂಘಟನೆ ಸ್ಥಾಪಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.ಮಹಾತ್ಮ ಗಾಂಧೀಜಿ ಸಾವರ್ಕರ್ ಅವರಿಂದ ಪ್ರೇರೇಪಣೆ ಪಡೆದಿದ್ದರು. ನೇತಾಜಿ ಸುಭಾಷ್ ಚಂದ್ರಬೋಷ್ ಐಎನ್ಎ ಸ್ಥಾಪಿಸಲು ಮೂಲ ಪ್ರೇರಣೆಯೆ ವೀರ ಸಾವರ್ಕರ್. ದೇಶ ಪ್ರೇಮಕ್ಕಾಗಿ 48 ವರ್ಷ ಜೀವಾವಧಿ ಶಿಕ್ಷೆಗೆ ಗುರಿಯಾದ ವಿಶ್ವದ ಮೊದಲ ವ್ಯಕ್ತಿ. ಅಂತಹ ಮಹಾನ್ ದೇಶಭಕ್ತನವಿರುದ್ಧ ಮಾತನಾಡುವುದುಬೌದ್ಧಿಕಅಧಃಪತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬಾಬು ಜಾದವ್, ಜಿಲ್ಲಾ ಕಾರ್ಯದರ್ಶಿ ನಟರಾಜ್, ಬಜರಂಗದಳ ಜಿಲ್ಲಾ ಸಂಚಾಲಕ ನಾರಾಯಣ ವರ್ಣೀಕರ್, ಸುಧಾಕರ್, ಸತೀಶ್, ರಾಜೇಶ್ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.