ಗಜಾನನ ಯುವಕ ಮಂಡಳಿಗಳು, ಯುವಕರು, ಮಕ್ಕಳು ಮತ್ತು ವಿವಿಧ ಸಂಘದ ಪದಾಧಿಕಾರಿಗಳು ಟ್ರ್ಯಾಕ್ಟರ್ ಮತ್ತು ಇನ್ನಿತರ ವಾಹನಗಳಲ್ಲಿ ಮೂರ್ತಿಗಳನ್ನು ಮೆರವಣಿಗೆ ನಡೆಸಿ ಕೂರಿಸಿದರು. ಗಣೇಶ ಬಪ್ಪ ಮೋರಿಯಾ ಎಂದು ಜೈಕಾರ ಹಾಕುತ್ತಾ ತಮ್ಮ ಭಕ್ತಿಯನ್ನು ವಿಘ್ನ ನಿವಾರಕನಿಗೆ ಸಮರ್ಪಿಸಿದರು. ವಿವಿಧ ಸ್ಥಳಗಳಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಂದೋಬಸ್ತ್ ಕಲ್ಪಿಸಲಾಗಿದೆ.