ಶಕ್ತಿನಗರ: ದೇವಸೂಗೂರು ಸರ್ಕಾರಿ ಹಿರಿಯ ಪ್ರಾಥಮಕ ಶಾಲಾ ಕಟ್ಟಡದ ಬಳಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್ ಅನ್ನು ಶನಿವಾರ ತೆರವುಗೊಳಿಸಲಾಯಿತು.

20 ವರ್ಷದ ಹಿಂದೆ ಗ್ರಾಮದಲ್ಲಿ ಟ್ಯಾಂಕ್ ನಿರ್ಮಿಸಲಾಗಿತ್ತು. ಟ್ಯಾಂಕ್‌ನ ಪಿಲ್ಲರ್ ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್ ಕಳಚಿ ಬೀಳುತ್ತಿತ್ತು. ವಿದ್ಯಾರ್ಥಿಗಳು ನಿತ್ಯವೂ ಟ್ಯಾಂಕ್‌ನ ಕೆಳಗೆ ಆಟ ಆಡುತ್ತಿರುತ್ತಾರೆ. ಅಪಾಯ ಸಂಭವಿಸುವ ಸಾಧ್ಯತೆ ಇದ್ದುದರಿಂದ ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ ಅವರು ಪಂಚಾಯತ್ ರಾಜ್ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಗೊಂಡ ದೇವಸೂಗೂರು ಗ್ರಾಮ ಪಂಚಾಯಿತಿ ಆಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು ಶನಿವಾರ ಓವರ್‌ಹೆಡ್ ಟ್ಯಾಂಕ್ ಅನ್ನು ತೆರವುಗೊಳಿಸಿದರು.

ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಯ ಕಿರಿಯ ಎಂಜಿನಿಯರ್ ಜಬ್ಬರ್, ಚಿತ್ರದುರ್ಗದ ತಾಂತ್ರಿಕ ಎಂಜಿನಿಯರ್ ಸೈಯ್ಯದ್, ದೇವಸೂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ, ಸದಸ್ಯರಾದ ಸಾಂಬಶಿವ, ಸಿದ್ಧಪ್ಪಗೌಡ, ನಾಗರಾಜ, ಸುರೇಶಗೌಡ ಚೇಗುಂಟಿ, ಷಣ್ಮುಖಪ್ಪಘಂಟೆ, ಮುಖಂಡರಾದ ಹಂಪನಗೌಡ, ವೆಂಕಟೇಶ ದೇವಸೂಗೂರು, ಆರ್‌ಟಿಪಿಎಸ್ ಕೇಂದ್ರ ಭದ್ರತಾ ಪಡೆಯ ಅಧಿಕಾರಿಗಳು ಈ ವೇಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.