ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ಪತ್ನಿಯ ಅಧ್ಯಕ್ಷೆ ಸ್ಥಾನ ಪತಿ ದುರ್ಬಳಕೆ

ತಾನೇ ಅದ್ಯಕ್ಷ ಎಂದು ಪೋಸ್ಟರ್‌ನಲ್ಲಿ ಪೋಸ್
ಬಿ.ಎ.ನಂದಿಕೋಲಮಠ
Published : 12 ಸೆಪ್ಟೆಂಬರ್ 2024, 6:17 IST
Last Updated : 12 ಸೆಪ್ಟೆಂಬರ್ 2024, 6:17 IST
ಫಾಲೋ ಮಾಡಿ
Comments

ಲಿಂಗಸುಗೂರು: ತಾಲ್ಲೂಕಿನ ಗೊರೆಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜೇಮ್ಮ ಆನಂದ ರಾಠೋಡ ಸ್ಥಾನದಲ್ಲಿ ಅಧ್ಯಕ್ಷೆ ಪತಿ ಆನಂದ ರಾಠೋಡ ತಾನೇ ಅಧ್ಯಕ್ಷನೆಂದು ಹೇಳಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಅಧಿಕಾರ ವಿಕೇಂದ್ರೀಕರಣದ ಮೂಲಕ ಮಹಿಳೆಯರಿಗೂ ರಾಜಕೀಯ ಸ್ಥಾನಮಾನ ನೀಡುವ ಮೀಸಲು ಬಹುತೇಕ ಕಡೆಗಳಲ್ಲಿ ದುರ್ಬಳಕೆ ಆಗುತ್ತಿರುವುದು ಸಾಮಾನ್ಯ. ತಾಯಿ, ತಂಗಿ, ಅಕ್ಕ, ಸೊಸೆ ಇತರೆ ಮಹಿಳಾ ಮೀಸಲಾತಿ ಹೆಸರಲ್ಲಿ ಅಧಿಕಾರ ಹಿಡಿಯುವ ಕುಟುಂಬಸ್ಥರೇ ಅವರ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪೋಸ್ಟರ್ ಹಾಕುವುದರ ಜೊತೆಗೆ ಸಭೆ ಸಮಾರಂಭಗಳಲ್ಲಿ ಅಧಿಕಾರ ದುರ್ಬಳಕೆ ಮಾಡುವುದು ಸಾಮಾನ್ಯವಾಗಿದೆ.

ಈ ಕುರಿತು ಸಾಕಷ್ಟು ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದರ್ಭದಲ್ಲಿಯೇ ಆನಂದ ರಾಠೋಡ ತಾನೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂಬಂತೆ ರಾಷ್ಟ್ರೀಯ ನಾಯಕರು, ಶರಣರು, ಚಿಂತಕರ ಜನ್ಮದಿನ, ಇತರೆ ಸಂದರ್ಭದಲ್ಲಿ ಶುಭ ಕೋರುವ ಭರಾಟೆ ಪೋಸ್ಟರ್‌ನಲ್ಲಿ ಅಧ್ಯಕ್ಷನೆಂದು ಹಾಕಿಕೊಂಡು ರಾಜಾ ರೋಷವಾಗಿ ಪೋಸ್ಟರ್ ಹಾಕಿಕೊಂಡಿದ್ದು, ಮಹಿಳಾ ಮೀಸಲಾತಿಗೆ ಅಪಚಾರ ಎಸಗಿದಂತಾಗಿದೆ ಎಂದು ಟೀಕೆಗಳು ಕೇಳಿಬಂದಿವೆ.

ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಅವರನ್ನು ಸಂಪರ್ಕಿಸಿದಾಗ, ‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಸ್ಥಾನಮಾನಗಳ ದುರ್ಬಳಕೆಗೆ ಅವಕಾಶವಿಲ್ಲ. ಬಹುತೇಕ ಕಡೆಗಳಲ್ಲಿ ಇಂಥ ಅವಘಡ ನಡೆಯುತ್ತಿರುವ ಆರೋಪಗಳು ಕೇಳಿಬಂದಿವೆ. ದಾಖಲೆ ಸಮೇತ ದೂರು ನೀಡಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT