ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ: ನೀರಿಲ್ಲದೆ ಒಣಗಿ ನಿಂತ ಗಿಡಗಳು 

ಜೈವಿಕ ಇಂಧನ ಉತ್ಪಾದನೆ, ಪರಿಸರ ಸಂರಕ್ಷಣೆಗಾಗಿ ಸಸಿ ನೆಟ್ಟಿದ್ದ ಕಂಪನಿ
Published 3 ಮಾರ್ಚ್ 2024, 5:55 IST
Last Updated 3 ಮಾರ್ಚ್ 2024, 5:55 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಇಲ್ಲಿನ ಚಿನ್ನದಗಣಿ ಕಂಪನಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಒಣಗಿ ನಿಂತಿವೆ.

ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎ.ಕೆ.ಮೊನ್ನಪ್ಪ ಅವರು ಜೈವಿಕ ಇಂಧನ ಉತ್ಪಾದನೆ ಹಾಗೂ ಪರಿಸರ ಸಂರಕ್ಷಣೆಗಾಗಿ ಸಸಿ ನಾಟಿ ಮಾಡಿಸಿದ್ದರು.  

ಗಣಿ ಕಂಪನಿಯು 2012–2015ರ ಅವಧಿಯಲ್ಲಿ 25,440 ಸಸಿಗಳನ್ನು ನೆಟ್ಟಿತ್ತು. ಅವುಗಳ ಪಾಲನೆ ಹಾಗೂ ಪೋಷಣೆಗಾಗಿ 4 ವರ್ಷಗಳಲ್ಲಿ ₹61 ಲಕ್ಷ ವೆಚ್ಚ ಮಾಡಲಾಗಿದೆ. ಸಸಿ ನೆಟ್ಟ ಸ್ಥಳಗಳನ್ನು ಈಗ ನೋಡಿದರೆ ಶೇ 80ರಷ್ಟು ಸಸಿಗಳು ಒಣಗಿವೆ. ಹಣ ಖರ್ಚು ಮಾಡಿದರೂ ಸಸಿಗಳು ಮಾತ್ರ ಬೆಳೆದು ನಿಂತಿಲ್ಲ. ಇದರಿಂದ ನೀರಲ್ಲಿ ಹೋಮ ಮಾಡಿದಂತೆ ಆಗಿದೆ ಎನ್ನುತ್ತಾರೆ ಕಾರ್ಮಿಕರು.

ಭೂಮಿಯ ಕೆಳ ಮೈಯಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ. ಚಿನ್ನದ ಅದಿರನ್ನು ಹೊರಗಡೆ ತಂದು ಸಂಸ್ಕರಣೆ ಮಾಡುವಾಗ ರಾಸಾಯನಿಕ ಬಳಸಲಾಗುತ್ತದೆ. ಈ ವೇಳೆ ರಾಸಾಯನಿಕ ಅಂಶ ಹೊರಬಂದು ಪರಿಸರಕ್ಕೆ ಹಾನಿಯುಂಟಾಗದಂತೆ ತಡೆಯಲು ಗಣಿ ಪ್ರದೇಶದ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡಲು ಸಸಿಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಲಾಗಿತ್ತು. ಸಸಿ ನೆಟ್ಟ ಮಾತ್ರಕ್ಕೆ ಅವುಗಳು ಬೆಳೆದು ನಿಲ್ಲುವುದಿಲ್ಲ. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎನ್ನುತ್ತಾರೆ ಜನ.

ಗಣಿ ಸುತ್ತಮುತ್ತ ಸಸಿಗಳನ್ನು ನೆಡಲಾಗಿದೆ. ನೆಟ್ಟ ಸಸಿಗಳ ಪಾಲನೆ ಮಾಡದೆ ಉದಾಸೀನ ಮಾಡಿದ ಕಾರಣ ಅವುಗಳು ಸತ್ತು ಹೋಗುತ್ತಿವೆ. ಪರಿಸರ ಸಂರಕ್ಷಣೆಗೆ ಮುಂದಾಗಬೇಕು
ಎಂ.ಸಿ.ಚಂದ್ರಶೇಖರ ನಾಯಕ ಹೋರಾಟಗಾರ
ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು
ಪ್ರಕಾಶ ಬಹದ್ದೂರ್ ಕಾರ್ಯನಿರ್ವಾಹಕ ನಿರ್ದೇಶಕ ಹಟ್ಟಿ ಚನ್ನದಗಣಿ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT