ಮಸ್ಕಿ: ಎತ್ತಿನ ಬಂಡಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.
ಗಾಯಗೊಂಡ ಮಹಿಳೆಯರು ಮಾನಮ್ಮ, ಮಲ್ಲಯ್ಯ, ಅಂಬಿಕಾ ಎಂದು ಗುರುತಿಸಲಾಗಿದೆ. ಟಾಟಾ ಏಸ್ ಚಾಲಕ ಕೂಡ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಲಿಂಗಸಗೂರು ತಾಲೂಕು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಿಂಗಸಗೂರು ಮಾರ್ಗವಾಗಿ ಅಂಕುಶದೊಡ್ಡಿ ಕಡೆ ಹೊರಟಿದ್ದ ಎತ್ತಿನ ಬಂಡಿಗೆ ಅದೇ ಮಾರ್ಗವಾಗಿ ವೇಗವಾಗಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಟಾಟಾ ಏಸ್ ವಾಹನ ಡಿಕ್ಕಿ ರಭಸಕ್ಕೆ ಎತ್ತಿನ ಬಂಡಿ ಸಹ ನಜ್ಜುಗುಜ್ಜಾಗಿದೆ. ಎತ್ತುಗಳಿಗೂ ಸಹ ಗಂಭೀರ ಗಾಯಗಳಾಗಿವೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.