ರಾಯಚೂರು: ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಗ್ನಿಪಥ ಸೇನಾ ಭರ್ತಿ ರ್ಯಾಲಿಯಲ್ಲಿ ಬೀದರ್ ಜಿಲ್ಲೆಯ 107 ಹಾಗೂ ಬೆಳಗಾವಿ ಜಿಲ್ಲೆಯ 753 ಅಭ್ಯರ್ಥಿಗಳ ಪೈಕಿ ಎರಡೂ ಜಿಲ್ಲೆಗಳ ಒಟ್ಟು 738 ಅಭ್ಯರ್ಥಿಗಳು ಹಾಜರಾದರು.

451 ಅಭ್ಯರ್ಥಿಗಳು 1600 ಮೀಟರ್ ಓಟದಲ್ಲಿ ಉತ್ತೀರ್ಣರಾಗಿ ಮುಂದಿನ ದೈಹಿಕ ಪರೀಕ್ಷೆಗೆ ಆಯ್ಕೆಯಾದರು ಎಂದು ಸೇನಾಧಿಕಾರಿ ಮನೋಜ್ ತಿಳಿಸಿದ್ದಾರೆ.

ಆಗಸ್ಟ್ 11ರಿಂದ 19ರ ವರೆಗೆ ನಿತ್ಯ ಬೆಳಗಾವಿ ಜಿಲ್ಲೆಯ 860 ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯಲಿದೆ. ಆ. 20ರಂದು ರಾಯಚೂರು ಹಾಗೂ ಬೆಳಗಾವಿ, 21, 22 ರಂದು ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಯಲಿದೆ.

ಆ.23 ರಂದು ಕೇಂದ್ರೀಯ ವರ್ಗ ಹಾಗೂ ಪ್ಯಾರಾ ಆಯ್ಕೆ, ಆ.24ರಂದು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಸಮಯಕ್ಕೆ ಹಾಜರಿರಬೇಕು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.