ಮಸ್ಕಿ: ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡುವ ಈ ದಿನಗಳಲ್ಲಿ ಪಟ್ಟಣದಲ್ಲಿ ಮಣ್ಣಿನಲ್ಲಿಯೇ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳ ತಯಾರಿಕೆ ನಡೆಯುತ್ತಿದೆ.
ಮಣ್ಣಿನಲ್ಲಿಯೇ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ತಯಾರು ಮಾಡುವ ಮೂಲಕ ವಿಶ್ವಕರ್ಮ ಸಮಾಜದ ಯುವ ಕಲಾವಿದ ಬಸವರಾಜ ಬಡಿಗೇರ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ.
ತನ್ನ ಕಿರಿದಾದ ಅಂಗಡಿಯಲ್ಲಿ ಕಳೆದ ಆರು ವರ್ಷಗಳಿಂದ 1 ಅಡಿಯಿಂದ 10 ಅಡಿವರೆಗೆ ವಿವಿಧ ಭಂಗಿಯ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳನ್ನು ಸಿದ್ಧಮಾಡಿ ಗ್ರಾಹಕರ ಕೈಗುಟುವ ದರಕ್ಕೆ ಮಾರಾಟ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರತಿ ಗಣೇಶನ ಹಬ್ಬಕ್ಕೆ 80 ರಿಂದ 100 ಗಣಪನ ಮೂರ್ತಿಗಳನ್ನು ಮಣ್ಣಿನಲ್ಲಿ ಮಾಡಿ ಅವುಗಳಿಗೆ ಜೀವ ಕಳೆ ತುಂಬುವ ಕೆಲಸ ಬಸವರಾಜ ಬಡಿಗೇರ್ ಮಾಡಿಕೊಂಡು ಬರುತ್ತಿದ್ದಾರೆ.
ಶ್ರೀರಾಮಚಂದ್ರ, ಆಂಜನೇಯ ಸೇರಿದಂತೆ ವಿವಿಧ ಅವತಾರದ ಗಣೇಶನನ್ನು ತಯಾರು ಮಾಡುವ ಇವರು ಈಗಾಗಲೇ ಸಿದ್ದಗೊಂಡಿರುವ ಅನೇಕ ಗಣೇಶನ ವಿಗ್ರಹಗಳಿಗೆ ಅಂತಿಮ ಹಂತದ ರೂಪ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಸವರಾಜ ಅವರ ಪರಿಸರ ಪ್ರೇಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಸ್ಕಿ ಪಟ್ಟಣದಲ್ಲಿ ಸಿದ್ದಗೊಂಡಿರುವ ಪರಿಸರ ಸ್ನೇಹಿ ಗಣೇಶನ ವಿಗ್ರಹಕ್ಕೆ ಅಂತಿಮ ರೂಪ ಕೊಡುತ್ತಿರುವ ಬಸವರಾಜ ಬಡಿಗೇರ