ರಾಯಚೂರಿನಲ್ಲಿ ಅಪ್ಪು ಅಂಗನವಾಡಿ ಕೇಂದ್ರ ಉದ್ಘಾಟನೆ: ಅಭಿಮಾನಿಗಳಿಗೆ ಅನ್ನಸಂತರ್ಪಣೆ

ರಾಯಚೂರು: ನಗರದ ತಿಮ್ಮಾಪುರ ಪೇಟೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಕ್ಕೆ ‘ಅಪ್ಪು ಅಂಗನವಾಡಿ ಕೇಂದ್ರ’ ಎಂದು ನಾಮಕರಣ ಮಾಡಿದ್ದು, ಶಾಸಕ ಡಾ.ಶಿವರಾಜ ಪಾಟೀಲ ಭಾನುವಾರ ಉದ್ಘಾಟಿಸಿದರು.
ಆನಂತರ ಮಾತನಾಡಿದ ಅವರು, ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಅಪ್ಪು ಹೆಸರಿಡಲು ರಾಜ್ಯ ಸರ್ಕಾರಕ್ಕೆ ಕೋರಲಾಗುವುದು ಎಂದರು.
ನಗರದ ಗಾಂಧಿಚೌಕ್ ಹನುಮಾನ ದೇವಸ್ಥಾನ ಅರ್ಚಕ ಪವನ ಆಚಾರ್ ಅವರ ಮೂಲಕ ವೇದಿಕೆಯಿಂದ ಚಿತ್ರನಟ ಶಿವರಾಜಕುಮಾರ್ ಅವರಿಗೆ ವಿಡಿಯೊ ಕಾಲ್ ಮಾಡಿ ಕಾರ್ಯಕ್ರಮದ ವಿವರ ತಿಳಿಸಲಾಯಿತು.
‘ಅಪ್ಪು ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಕಲಾವಿದರಿಗೆ ಪ್ರತಿವರ್ಷ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡುವುದಾಗಿ ಈ ಮೊದಲೇ ಘೋಷಿಸಿದ್ದೇನೆ. ಮೊದಲ ಕಾರ್ಯಕ್ರಮಕ್ಕೆ ತಾವು ಬರಬೇಕು’ ಎಂದು ಶಾಸಕರು ಇದೇ ವೇಳೆ ಆಹ್ವಾನಿಸಿದರು.
ಖಂಡಿತ ಬರುವುದಾಗಿ ನಟ ಶಿವರಾಜಕುಮಾರ್ ಒಪ್ಪಿಗೆ ಸೂಚಿಸಿದರು. ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಡ್ ಸಂಖ್ಯೆ 16 ರ ಸದಸ್ಯೆ ಗಾಯತ್ರಿ ಹರೀಶ್ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.