ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚಬೇಕು: ಶಾಂತಮಲ್ಲಾ ಶಿವಾಚಾರ್ಯ ಮಹಾಸ್ವಾಮಿ

Last Updated 22 ಜನವರಿ 2021, 15:39 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು, ಸಂಗೀತ ಸಾಧಕರು ಉನ್ನತ ಸಾಧನೆ ಮಾಡಿದ್ದಾರೆ. ಆದರೂ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ದುರಂತ. ಇದು ತೊಲಗಬೇಕು ಎಂದು ಕಿಲ್ಲೇ ಬೃಹನ್ಮಠದ ಶಾಂತಮಲ್ಲಾ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.

ನಗರದ ಸ್ವರ ಸಂಗಮ ಸಂಗೀತ ವಿದ್ಯಾಸಂಸ್ಥೆಯಲ್ಲಿ ಡಾ.ಪಂ.ನರಸಿಂಹಲು ವಡವಾಟಿಯವರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಏರ್ಪಡಿಸಿದ್ದ ಕಲಾವಿದರ ದಿನ ಉದ್ಘಾಟಿಸಿ ಮಾತನಾಡಿದರು.

‘ಪಂಡಿತ್ ಸಿದ್ದರಾಮ ಜಂಬಲದಿನ್ನಿ ಅವರು ಸಂಗೀತ ಕ್ಷೇತ್ರದ ದಿಗ್ಗಜರು. ಅವರ ಸಾಧನೆ ಜನ ಮರೆಯುವಂತಿಲ್ಲ. ಅವರ ಶಿಷ್ಯರಲ್ಲಿ ಒಬ್ಬರಾದ ನರಸಿಂಹಲು ವಡವಾಟಿ ಅವರು ಕ್ಲಾರಿಯೋನೆಟ್ ವಾದನದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಸಾಮಾನ್ಯ ಸಾಧನೆಯಲ್ಲ. ಅವರ ಕಲೆಯನ್ನು ಉಳಿಸಿ ಶಿಷ್ಯರಿಗೆ ನೀಡುತ್ತಿದ್ದು ಶ್ಲಾಘನೀಯ’ ಎಂದರು.

ಕೃಷಿ ವಿಜ್ಞಾನಿ ಪ್ರಮೋದ್‍ ಕಟ್ಟಿಮನಿ ಮಾತನಾಡಿ, ಜಿಲ್ಲೆಯ ಸಾಧಕರೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಜಿಲ್ಲೆಗೆ ಸೌಭಾಗ್ಯ. ಇವರ ಸಮಕಾಲಿನರಾಗಿದ್ದೇ ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಸಾಹಿತಿ ಪ್ರೊ.ಕೆ.ಇ. ರಾಧಾಕೃಷ್ಣ ಮಾತನಾಡಿ, ನರಸಿಂಹಲು ವಡವಾಟಿ ಅವರು ದೇಶಕ್ಕೆ ಹೆಮ್ಮೆ. ತಮ್ಮ ಉಸಿರನ್ನು ಸಂಗೀತಮಯವಾಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಸರಸ್ವತಿ ರಾಜಶೇಖರ್, ಗಾಯಕ ವಡವಾಟಿ ಶಾರದಾ ಭರತ್, ವಡವಾಟಿ ತೇಜಶ್ರೀ ಭರತ್, ವಡವಾಟಿ ಶ್ರೇಯಾಂಕಿತ ಭರತ್, ಸಾಯಿ ಸಂಜನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದರು. ಪಂ.ನರಸಿಂಹಲು ವಡವಾಟಿ ದಂಪತಿಗೆ ಸನ್ಮಾನಿಸಲಾಯಿತು.

ಬಾಗಲಕೋಟೆಯ ಸಾಹಿತಿ ಬಸವರಾಜ ಭಗವತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಾರ್ಯದರ್ಶಿ ಕೆ.ಯೋಗರವೀಶ್ ಭಾರತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT