ರಾಯಚೂರು: ಲೇಖಕಿ, ಕವಯತ್ರಿ ಎಚ್. ಎಸ್. ಮುಕ್ತಾಯಕ್ಕ ಅವರಿಗೆ ರಾಜ್ಯ ಸರ್ಕಾರ 2023–2024ನೇ ಸಾಲಿನ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪ್ರಕಟಿಸಿದೆ.

ಪ್ರಶಸ್ತಿಯು ₹ 5 ಲಕ್ಷ ನಗದು, ಸ್ಮರಣಿಗೆ ಪ್ರಶಸ್ತಿ ಫಲಕ, ಶಾಲು ಹಾಗೂ ಫಲತಾಂಬೂಲ ಒಳಗೊಂಡಿದೆ.

ಸಾಹಿತಿ ಶಾಂತರಸ ಹಾಗೂ ಲಕ್ಷ್ಮಿದೇವಿ ಅವರ ಮಗಳು ಎಚ್. ಎಸ್. ಮುಕ್ತಾಯಕ್ಕ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಮುಕ್ತಾಯಕ್ಕ ಅವರು ಐದು ಕವನ ಸಂಕಲನ, ಮೂರು ಗಜಲುಗಳ ಸಂಕಲನ, ಒಂದು ದ್ವಿಪದಿ ಸಂಕಲನ, ಒಂದು ಸಮಗ್ರ ಗಜಲುಗಳ ಸಂಕಲನ ಮತ್ತು ಸಂಶೋಧನೆ, ವೈಚಾರಿಕ, ಪ್ರವಾಸ ಕಥನವನ್ನು ಒಳಗೊಂಡು ಐದು ಗದ್ಯ ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚಿಗಷ್ಟೆ ಇವರ ಕವನ ಸಂಕಲನ "ನಿನಗಾಗಿ ಬರೆದ ಕವಿತೆಗಳು" ಇಂಗ್ಲಿಷ್ನಲ್ಲಿ "poems written for you " ಪ್ರಕಟವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಬಂದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಶುದ್ಧ ಗಜಲುಗಳ ಸಂಕಲನ ನೀಡಿದ ಶ್ರೇಯಸ್ಸು ಮುಕ್ತಾಯಕ್ಕ ಅವರಿಗೆ ಸಲ್ಲುತ್ತದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮತ್ತು ವಿಶೇಷ ಗೌರವ ಪ್ರಶಸ್ತಿ, ಮಾತೋಶ್ರೀ ರತ್ನಮ್ಮಾ ಪ್ರಶಸ್ತಿ, ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಕರ್ಕೆ ಪ್ರಶಸ್ತಿ ಹೀಗೆ ಇನ್ನು ಅನೇಕ ಪ್ರಶಸ್ತಿಗಳು ಲಭಿಸಿವೆ.

‘ಪ್ರಶಸ್ತಿ ಅನಿರೀಕ್ಷಿತವಾಗಿ ದೊರಕಿದೆ. ಪ್ರಶಸ್ತಿಗಾಗಿ ಯಾವುದೇ ಲಾಬಿ ಮಾಡಿರಲಿಲ್ಲ. ಯಾರಿಗೂ ದುಂಬಾಲು ಬಿದ್ದಿರಲಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ’ ಎಂದು ಮುಕ್ತಾಯಕ್ಕ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.