ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಜೀವನರಾಮ್‍ ಹಸಿರು ಕ್ರಾಂತಿ ಪಿತಾಮಹ: ಸಂಸದ ರಾಜಾ ಅಮರೇಶ್ವರ

Published 5 ಏಪ್ರಿಲ್ 2024, 13:53 IST
Last Updated 5 ಏಪ್ರಿಲ್ 2024, 13:53 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಜಗಜೀವನರಾಮ್ ಹಸಿರು ಕ್ರಾಂತಿ ರೂಪಿಸಿ, ದೇಶದ ಆಹಾರ ಉತ್ಪಾದನೆ ಹೆಚ್ಚಿಸುವ ಜೊತೆಗೆ ರೈತರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿದ್ದರಿಂದ ಅವರನ್ನು ಹಸಿರು ಕ್ರಾಂತಿ ಪಿತಾಮಹ’ ಎಂದು ಕರೆಯುತ್ತಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ಜಗಜೀವನರಾಮ್‍ 117ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಕಂದಾಚಾರಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಮಹಾನ್‍ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜಗಜೀವನರಾಮ್‍ ಬದುಕು, ನಡೆದು ಬಂದ ದಾರಿ ನಮಗೆಲ್ಲ ಮಾದರಿಯಾಗಬೇಕು’ ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಜಗನ್ನಾಥ ಕುಲಕರ್ಣಿ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಭಾರತದಲ್ಲಿ ಸಾಮಾಜಿಕ ಅಂಕುಡೊಂಕು ತಿದ್ದುವಲ್ಲಿ ಜಗಜೀವನರಾಮ್‍ ಮಹತ್ವದ ಪಾತ್ರ ವಹಿಸಿದ್ದಾರೆ. ದಲಿತ ಕುಟುಂಬದಲ್ಲಿ ಜನಿಸಿ ರಾಷ್ಟ್ರ ಮಟ್ಟದಲ್ಲಿ ಮೇಧಾವಿ ನಾಯಕತ್ವ ನೀಡಿದ ಅವರ ಕೊಡುಗೆ ಅಪಾರ. ಅಸ್ಪೃಶ್ಯತೆ ನಿವಾರಣೆ ಹೋರಾಟದ ಮಹಾನ್‍ ನಾಯಕರಾಗಿದ್ದ ಅವರನ್ನು ಬಾಬೂಜಿ’ ಎಂದು ಕರೆಯಲಾಗುತ್ತದೆ’ ಎಂದರು.

ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷರಾದ ಅಯ್ಯಪ್ಪ ಮಾಳೂರು ಲಿಂಗಸುಗೂರು, ಹುಲಗೇಶ ಕಾಚಾಪುರ ಮುದಗಲ್ಲ ಅಧ್ಯಕ್ಷತೆ ವಹಿಸಿದ್ದರು. ನಗರ ಘಟಕ ಅಧ್ಯಕ್ಷ ಈಶ್ವರ ವಜ್ಜಲ. ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್ಲ, ವೀರನಗೌಡ ಲೆಕ್ಕಿಹಾಳ, ಕೆ. ನಾಗರಾಜ, ಸಂಗಣ್ಣ ಗುಂತಗೋಳ, ಚೆನ್ನಪ್ಪಗೌಡ ಕರಡಕಲ್ಲ, ಜೂವಲೆಪ್ಪ ನಾಯ್ಕ, ನಾರಾಯಣಪ್ಪ ನಾಯ್ಕ, ದ್ಯಾಮಣ್ಣ ಫೂಲಭಾವಿ, ಲಿಂಗಪ್ಪ ದೇವಿಕೇರಿ, ಸುನಿತಾ ಪರಶುರಾಮ ಕೆಂಭಾವಿ, ಶಂಕರಗೌಡ ಬಳಗಾನೂರ ಇದ್ದರು.

ತಹಶೀಲ್ದಾರ್ ಕಚೇರಿ: ತಾಲ್ಲೂಕು ಆಡಳಿತ ಚುನಾವಣಾ ನೀತಿ ಸಂಹಿತೆ ನಿಮಿತ್ತ ಶುಕ್ರವಾರ ಮಿನಿ ವಿಧಾನಸೌಧ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನರಾಮ್‍ 117ನೇ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಿಸುವ ಮೂಲಕ ಸರಳವಾಗಿ ಆಚರಿಸಿದರು

ತಹಶೀಲ್ದಾರ್ ಮಲ್ಲಪ್ಪ ಯರಗೋಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಸೇರಿದಂತೆ ವಿವಿಧ ಇಲಾಖೆ ಮುಖ್ಯಸ್ಥರು, ದಲಿತ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಕಾಂಗ್ರೆಸ್‍ ಕಚೇರಿ: ಸ್ಥಳೀಯ ಬ್ಲಾಕ್‍ ಕಾಂಗ್ರೆಸ್‍ ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಗೋವಿಂದ ನಾಯಕ ನೇತೃತ್ವದಲ್ಲಿ ಬಾಬು ಜಗಜೀವನರಾಮ್‍ 117ನೇ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಿಸುವ ಮೂಲಕ ಸರಳವಾಗಿ ಆಚರಿಸಿದರು. ಮುಖಂಡರಾದ ವೀರಭದ್ರಯ್ಯ ಗುಂತಗೋಳ, ಬಾಬಾಖಾಜಿ , ಖಾಜಾಹುಸೇನ ಫೂಲವಾಲೆ, ಹಾಜಿಬಾಬು, ಶರಣಪ್ಪ ಗೋನವಾರ ಸೇರಿದಂಎ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

ಲಿಂಗಸುಗೂರ ತಹಶಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಹಶೀಲ್ದಾರ್ ಮಲ್ಲಪ್ಪ ಯರಗೋಳ ನೇತೃತ್ವದಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.
ಲಿಂಗಸುಗೂರ ತಹಶಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಹಶೀಲ್ದಾರ್ ಮಲ್ಲಪ್ಪ ಯರಗೋಳ ನೇತೃತ್ವದಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.
ಲಿಂಗಸುಗೂರ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ನೇತೃತ್ವದಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.
ಲಿಂಗಸುಗೂರ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ನೇತೃತ್ವದಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT