ಸಿಂಧನೂರು: ‘ವಿದ್ಯಾರ್ಥಿ-ಯುವಜನರ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕಬಡ್ಡಿಯಂತಹ ಕ್ರೀಡೆಗಳು ಸಹಕಾರಿಯಾಗಿವೆ’ ಎಂದು ಬಿಜೆಪಿ ಮುಖಂಡ ಕೆ.ಕರಿಯಪ್ಪ ಅಭಿಪ್ರಾಯಪಟ್ಟರು.

ನಗರದ ವಾರ್ಡ್ ನಂ.17ರ ವೆಂಕಟೇಶ್ವರ ನಗರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಮಟ್ಟದ ಪುರುಷರ ಹಾಗೂ ತಾಲ್ಲೂಕು ಮಟ್ಟದ ಮಹಿಳೆಯರ ಭಜರಂಗಿ ಟ್ರೋಫಿ ಕಬಡ್ಡಿ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಬಡ್ಡಿ ಟೂರ್ನಿಯಲ್ಲಿ 32 ಪುರುಷರ ತಂಡಗಳು, 6 ಮಹಿಳೆಯರ ತಂಡಗಳು ಭಾಗವಹಿಸಿದ್ದವು. ಮಧ್ಯಾಹ್ನ 1 ಗಂಟೆಯಿಂದ ರಾತ್ರಿಯವರೆಗೂ ಪಂದ್ಯಗಳು ನಡೆದವು. ಕಬಡ್ಡಿ ವೀಕ್ಷಣೆಗಾಗಿ ಸಾವಿರಾರು ಯುವಕರು, ಮಹಿಳೆಯರು ಭಾಗವಹಿಸಿ ಕೇಕೆ, ಶಿಳ್ಳೆ ಹಾಕಿ ಪ್ರೋತ್ಸಾಹ ನೀಡಿದರು.

ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ಸುರೇಶ ನೆಕ್ಕಂಟಿ, ನಿಕಟ ಪೂರ್ವ ಅಧ್ಯಕ್ಷ ಸುರೇಶ ಹಚ್ಚೊಳ್ಳಿ, ಉಪಾಧ್ಯಕ್ಷರಾದ ಹನುಮೇಶ ಕುರುಕುಂದಿ, ಸಿದ್ದಪ್ಪ ಜೀನೂರು, ಪ್ರಧಾನ ಕಾರ್ಯದರ್ಶಿ ರವಿಕುಮಾರ ಉಪ್ಪಾರ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ನಗರ ಮಂಡಲದ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಮುಖಂಡರಾದ ಅಜಯ್ ದಾಸರಿ, ನಾಗರಾಜ ಬಾದರ್ಲಿ, ರವಿ ಹಿರೇಮಠ, ಚಂದ್ರಶೇಖರ ಎಂ., ವೆಂಕೋಬಣ್ಣ ಕಲ್ಲೂರು, ಪದ್ಮಾನಾಯ್ಡು, ಶಿವು, ರವಿಗೌಡ ಪನ್ನರು, ಶಿವಲೀಲಾ ಹಿರೇಮಠ, ಸಹನಾ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.