ಗುರುವಾರ , ಜನವರಿ 23, 2020
27 °C

ರಸ್ತೆ ಮಧ್ಯೆಯೇ ಬಾನಾಮತಿ; ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತಾಲ್ಲೂಕಿನ ಮನ್ಸಲಾಪುರ ಮರ್ಚೆಡ್ ಮಾರ್ಗದ ಮುಖ್ಯರಸ್ತೆ ಮಧ್ಯೆದಲ್ಲಿಯೇ ಬಾನಾಮತಿ ಮಾಡಿ, ಕೆಲವು ವಸ್ತುಗಳನ್ನು ಇರಿಸಿದ್ದರಿಂದ ಜನರು ಆತಂಕದಿಂದ ಸಂಚರಿಸುವಂತಾಗಿದೆ.

ಈ ಮಾರ್ಗದಲ್ಲಿ ಮೂರು ರಸ್ತೆಗಳು ಸೇರುತ್ತಿದ್ದು, ಭಾನುವಾರ ಮಧ್ಯೆರಾತ್ರಿ ಈ ಕೃತ್ಯ ನಡೆಸಲಾಗಿದೆ. ಕಪ್ಪು ವಸ್ತ್ರಗಳಲ್ಲಿ ಗುಂಟು ಕಟ್ಟಿ, ಅವುಗಳ ಪಕ್ಕದಲ್ಲಿ ನಾಲ್ಕು ಮಣ್ಣಿನ ಗೊಂಬೆಗಳನ್ನು ಇಡಲಾಗಿದೆ. ಅವುಗಳಿಗೆ ಟಾಚನ್ ಪಿನ್ ಗಳನ್ನು ಚುಚ್ಚಲಾಗಿದೆ. ಅದರ ಜತೆಗೆ ನಿಂಬೆಹಣ್ಣು, ಕವಡೆ, ಈರುಳ್ಳಿ ಮೊಟ್ಟೆಗಳನ್ನು ಇರಿಸಿದ್ದು. ಹತ್ತಾರು ದೀಪಗಳನ್ನು ಹೊತ್ತಿಸಲಾಗಿದೆ. ನೋಡುವುದಕ್ಕೆ ಜನರು ಭಯ ಪಡುತ್ತಿದ್ದಾರೆ. ಇದು ಭಾನಾಮತಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಬೈಪಾಸ್ ರಸ್ತೆಯಲ್ಲೂ ಇದಕ್ಕೂ ದೊಡ್ಡ ಪ್ರಮಾಣದ ಮಾಟ, ಮಂತ್ರ ಮಾಡಿರುವುದು ಕಂಡುಬಂದಿತ್ತು. ಇಂಥ ಕೃತ್ಯಗಳು ಮರುಕಳಿಸುತ್ತಿದ್ದು ಪೊಲೀಸರು ಗಸ್ತು ತಿರುಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)