ಗುರುವಾರ , ಮೇ 26, 2022
22 °C

ಎರಡು ಟಿಪ್ಪರ್‌ಗಳ ಮಧ್ಯೆ ಸಿಲುಕಿದ ಕಾರು: ಯುವಕ, ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದಗಣಿ (ರಾಯಚೂರು): ಎದಿರು ಬದಿರು ಬಂದ ಟಿಪ್ಪರ್‌ಗಳ ಮಧ್ಯೆ ಕಾರು ಸಿಲುಕಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯುವಕ ಮತ್ತು ಯುವತಿಯ ದೇಹ ಛಿದ್ರಗೊಂಡಿರುವ ಭೀಕರ ಅಪಘಾತ ಘಟನೆವೊಂದು ಲಿಂಗಸುಗೂರು ತಾಲ್ಲೂಕು ಗೋಲಪಲ್ಲಿ ಬಳಿ ಶ್ರೀರಂಗಪಟ್ಟಣ–ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.

ಹರ್ಷಿತಾ (26) ಹಾಗೂ ಭುವನ (27) ಸ್ಥಳದಲ್ಲೇ ಮೃತಪಟ್ಟಿದ್ದು, ದೇಹದ ಭಾಗಗಳು ಛಿದ್ರವಾಗಿ ಹೆದ್ದಾರಿಯಲ್ಲಿ ಬಿದ್ದಿದ್ದವು. ಶವ ಹೊರತೆಗೆಯುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಾರಿನ ಫಲಕವೂ ಸೇರಿದಂತೆ ಛಿದ್ರವಾಗಿದ್ದರಿಂದ ಮೃತರ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಇದೀಗ ಹೆಸರುಗಳು ಮಾತ್ರ ಗೊತ್ತಾಗಿವೆ.

ದೇವದುರ್ಗದಿಂದ ದಾವಣಗೆರೆಯತ್ತ ಕಾರು ಸಂಚರಿಸುತ್ತಿತ್ತು. ಟಿಪ್ಪರ್‌ಗಳು ಕಂಕರ್‌ ಸಾಗಿಸುತ್ತಿದ್ದವು. ಗೋಲಪಲ್ಲಿ ಅಪಘಾತ ವಲಯವಾಗಿದ್ದು, ನಿಧಾನವಾಗಿ ಸಂಚರಿಸುವಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಎರಡು ವಾಹನಗಳು ಎದುರು ಬದಿರಾಗುವಾಗ ಸ್ವಲ್ಪ ಯಾಮಾರಿದರೂ ಯಮನಪಾದ ಸೇರಬೇಕಾಗುತ್ತದೆ.

ಇದೇ ತಾಣದಲ್ಲಿ ಮೇಲಿಂದ ಮೇಲಿಂದ ಅಪಘಾತಗಳು ಸಂಭವಿಸುತ್ತಿದ್ದರೂ, ಅಪಘಾತ ತಪ್ಪಿಸಲು ಅಗತ್ಯ ಕ್ರಮಗಳು ಜಾರಿಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು