ಸಿರವಾರ: ಸಮೀಪದ ಚಾಗಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಗಭಾವಿ ಕ್ಯಾಂಪ್‌ನಲ್ಲಿ ವಾರದಿಂದ ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಬುಧವಾರ ಚಾಗಭಾವಿ ಕ್ಯಾಂಪ್ ಅನ್ನು ಸೀಲ್‌ಡೌನ್ ಮಾಡಲಾಯಿತು.

ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಮಾತನಾಡಿ, ಕ್ಯಾಂಪಿಗೆ ಬರುವುದು ಅಥವಾ ಕ್ಯಾಂಪಿನಿಂದ ಬೇರೆಡೆ ತೆರಳುವುದು ಸಂಪೂರ್ಣ ನಿಷೇಧಿಸಲಾಗಿದೆ. ರಸ್ತೆಯನ್ನು ಮುಳ್ಳು ತಂತಿ, ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಲಾಗಿದೆ ಎಂದರು.

ಅಗತ್ಯವಾದ ದಿನಬಳಕೆಯ ವಸ್ತುಗಳನ್ನು ಪೂರೈಸುವಂತೆ ಪಿಡಿಒ ಅವರಿಗೆ ಸೂಚಿಸಿಲಾಗಿದ್ದು ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಎಸ್ಐ ಎಂ.ಡಿ.ಪಾಷ, ಕಂದಾಯ ಅಧಿಕಾರಿ ಶ್ರೀನಾಥ, ಗ್ರಾಮಸ್ಥರಾದ ಉದಯ ಕುಮಾರ, ಸುಭಾಷ್, ಬಸವರಾಜ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಪೊಲೀಸರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.