ರಾಯಚೂರು: ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದ ಎರಡನೇ ದಿನದ ಶ್ವಾನ ಪ್ರದರ್ಶನದಲ್ಲಿ ‘ಗ್ರೇಡ್ ಡೆನ್ ’ ತಳಿಯ ಸಾಗರ್ ಶ್ವಾನ ಚಾಂಪಿಯನ್ ಪಟ್ಟ ಪಡೆಯಿತು.

ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಪಗ್, ಗೋಲ್ಡನ್ ಪೆಟ್, ವೇರ್ ಪಂಜಾಬಿ, ಜರ್ಮನ್ ಶಫರ್ಡ್, ಕೋಲಿನ್ ಪೈಜ್ ಶೆಲ್ಟ್, ಹೆವಿ ಬ್ರಿಡ್, ಡೊಮೆರಿನ್, ಮುಧೋಳ ಹೊಂಡ, ಲವ್ಲಿ ಸ್ವಿಡ್ಜ್ ಡ್ರೈನ್, ರೋಟ್ ವಿಲ್ಲರ್ ಸೇರಿ ವಿವಿಧ ದೇಸಿ ವಿದೇಶಿಯ 14 ತಳಿಯ ಶ್ವಾನಗಳ ಪ್ರದರ್ಶನ ನಡೆಯಿತು.

ಶ್ವಾನ ಪ್ರದರ್ಶನಕ್ಕಾಗಿ ಮಾಲೀಕರು ಡಿ.3ರಿಂದ ಶ್ವಾನಗಳ ಮಾಲೀಕರು ಪಶು ಇಲಾಖೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಿದ್ದರು. ಜಗಜೀವನ್ ರಾಮ್ ಆನಿಮಲ್ಸ್ ಸೈನ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಪಶುಪಾಲನಾ ಇಲಖೆಯ ಆಶ್ರಯದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ರಾಯಚೂರು, ಬೀದರ್, ಕಲಬುರಗಿ ಜಿಲ್ಲೆಗಳ ಶ್ವಾನ ಪ್ರಿಯರು ತಮ್ಮ ಶ್ವಾನಗಳನ್ನು ಪ್ರದರ್ಶನಕ್ಕೆ ತಂದಿದ್ದರು.

ಬಳ್ಳಾರಿಯ ಕೆವಿಕೆ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ, ಗಂಗಾವತಿ ಕೆವಿಕೆಯ ಮಹಾಂತೇಶ, ಪ್ರಾಧ್ಯಾಪಕರಾದ ಪ್ರಹ್ಲಾದ್ ಉಭಾಳೆ, ಕೊಟ್ರೇಶ ತೀರ್ಪುಗಾರರಾಗಿದ್ದರು.

‘ಶ್ವಾನ ಪ್ರದರ್ಶನಕ್ಕೆ ದೊಡ್ಡದಾದ ಮೈದಾನ ಇದ್ದರೆ ಚೆನ್ನಾಗಿತ್ತು ಇಕ್ಕಟ್ಟಾದ ಜಾಗದಲ್ಲಿ ಮಾಡಿದ್ದರಿಂದ ಗದ್ದಲ ಹೆಚ್ಚಾಗಿ ಅನೇಕರು ಶ್ವಾನಗಳನ್ನು ಕರೆತಂದು ವಾಪಸ್ ಹೋಗಿದ್ದು ಕೆಲವರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದಾರೆ‘ ಎಂದು ಪ್ರದರ್ಶನದ ಆಯೋಜಕ ಬಸವರಾಜ ಪಾಟೀಲ ತಿಳಿಸಿದರು.

'ಶ್ವಾನ ಪ್ರದರ್ಶನಕ್ಕೆ ₹100 ನೋಂದಣಿ ಶುಲ್ಕ ನಿಗದಿಪಡಿಸಲಾಗಿತ್ತು. ಈ ಹಣದಲ್ಲಿಯೇ ಶ್ವಾನಗಳಿಗೆ ಒಂದು ಲೀಟರ್ ಹಾಲು, ಮಾಲೀಕರಿಗೆ ನೀರಿನ ಬಾಟಲಿ ನೀಡಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಒಂದು ಶ್ವಾನಕ್ಕೆ ಚಾಂಪಿಯನ್ ಪ್ರಶಸ್ತಿ ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.