ವೋಟ್ ಮೋದಿಗೆ ಹಾಕ್ತೀರಾ, ಸಮಸ್ಯೆ ನನಗೆ ಹೇಳ್ತೀರಾ?: ಸಿಎಂ ಕುಮಾರಸ್ವಾಮಿ ಆಕ್ರೋಶ

ರಾಯಚೂರು: ‘ನರೇಂದ್ರ ಮೋದಿಯವರಿಗೆ ವೋಟ್ ಹಾಕ್ತೀರಿ...ಸಮಸ್ಯೆ ನಾನು ಬಗೆಹರಿಸಬೇಕಾ’?
ಹೀಗೆ ಆಕ್ರೋಶ ವ್ಯಕ್ತಪಡಿಸಿದವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಬಸ್ನಲ್ಲಿ ಬುಧವಾರ ತೆರಳುತ್ತಿದ್ದ ವೇಳೆ ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಿಟ್ಟಿಗೆದ್ದರು.
‘ನಿಮ್ಮ ಮನವಿಪತ್ರ ಸ್ವೀಕರಿಸಿದ್ದೇನೆ. ನಿಮಗೆ ಮರ್ಯಾದೆ ಕೊಡಬೇಕಾ? ಲಾಠಿ ಚಾರ್ಜು ಮಾಡಿಸಬೇಕಾ’ ಎಂದು ಪ್ರಶ್ನಿಸಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಗಿತ್ತು.
* ಇವನ್ನೂ ಓದಿ...
* ಗ್ರಾಮ ವಾಸ್ತವ್ಯಕ್ಕೆ ಹೋಗುವಾಗ ಸಿಎಂ ಬಸ್ಗೆ ಟಿಎಲ್ಬಿಸಿ ಕಾರ್ಮಿಕರಿಂದ ಅಡ್ಡಿ
* ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹3 ಸಾವಿರ ಕೋಟಿ: ಮುಖ್ಯಮಂತ್ರಿ
* ಜಲಧಾರೆ ಯೋಜನೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು- ಸಿಎಂ
* ಗ್ರಾಮ ವಾಸ್ತವ್ಯ| ರಾಯಚೂರಿಗೆ ಬಂದಿಳಿದ ಸಿಎಂ, ಕಾರ್ಮಿಕ ಹೋರಾಟ ಬಿಸಿ ತಟ್ಟುವುದೇ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.