ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ: ಸಚಿವ ಬೋಸರಾಜು

Published 16 ಏಪ್ರಿಲ್ 2024, 15:47 IST
Last Updated 16 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ರಾಯಚೂರು: ‘ಪಕ್ಷಾತೀತವಾಗಿ ಸಮಾಜದ ಎಲ್ಲ ವರ್ಗದ ಜನರಿಗೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಇವು ರಾಷ್ಟ್ರಕ್ಕೆ ಮಾದರಿಯಾದ ಯೋಜನೆಗಳಾಗಿವೆ‘ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜು ಹೇಳಿದರು.

ರಾಯಚೂರು ನಗರ ವಿಧಾನಸಭಾ ಕ್ಷೇತ್ರ ವಡವಾಟಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ, ಮುಖಂಡರ ಸಭೆ ಹಾಗೂ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

‘₹56 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಜನರ ಬಾಗಿಲಿಗೆ ತಲುಪಿಸಲಾಗಿದೆ. ಇನ್ನೂ ಹೆಚ್ಚಿನ ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ ಅವರನ್ನು ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು‘ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ ಮಾತನಾಡಿ, ‘ಬಿಜೆಪಿಯವರು ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ 70ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ನೀರು, ಸೂರು, ವಿದ್ಯುತ್, ರಸ್ತೆಗಳನ್ನು, ಉದ್ಯೋಗ, ಶಾಲಾ-ಕಾಲೇಜುಗ ನೀಡಿದ್ದೇ ಕಾಂಗ್ರೆಸ್ ಎನ್ನುವುದನ್ನು ಯಾರೂ ಮರೆತಿಲ್ಲ. ಆದರೆ, 10 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಪಕ್ಷದ ಹಿರಿಯರಾದ ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಬಸಿರುದ್ದಿನ್ ಮಾತನಾಡಿದರು. ರಾಯಚೂರು ಗ್ರಾಮೀಣ ಬ್ಲಾಕ್ ಅಧ್ಯಕ್ಷ ಕುರಬದೊಡ್ಡಿ ಆಂಜನೇಯ ಬಶೀರುದ್ಧಿನ್, ಬೋಳಬಂಡಿ,  ನರಸಿಂಹಲು ಮಾಡಗಿರಿ, ತಿಮ್ಮಪ್ಪ ಮ್ಯಾತ್ರಿ, ಮಹದೇವ, ನರಸಿಂಹಲು ವಡವಾಟಿ, ಚೇತನ, ಮೊಹ್ಮದ್ ಶೈಬಾಜ್, ಬೋಳಬಂಡಿ  ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ:

ಜಿಲ್ಲಾ ಪಂಚಾಯಿತಿ ಗಿಲ್ಲೇಸೂಗುರ ಕ್ಷೇತ್ರದ ವ್ಯಾಪ್ತಿಯ ಹೀರಾಪೂರ,ಮೂಡಲದಿನ್ನಿ,ಕಟಕನೂರು, ಹನುಮಪೂರ ಗ್ರಾಮಗಳಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಕಾಂಗ್ರೆಸ್ ಪ ಅಭ್ಯರ್ಥಿ ಜಿ. ಕುಮಾರ ನಾಯಕ ಪರವಾಗಿ ಮತಯಾಚನೆ ಮಾಡಿದರು

ಮಲ್ಲಿಕಾರ್ಜುನ ಗೌಡ, ಜನಾರ್ದನಗೌಡ, ನಾಗೇಂದ್ರಪ್ಪ, ಬಷೀರ್, ನಾರಾಯಣ ವಕೀಲ, ಉಮೇಶ ಗೌಡ, ತಿಮ್ಮಪ್ಪ ಆಲ್ಕೂರ,ಶಿವಪ್ಪ ನಾಯಕ, ಕೆ. ಈರಣ್ಣ, ರಮೇಶ ರೋಸ್ಲಿ, ನಜೀರ್ ಸಾಬ್ , ಮುಕ್ಕಣ್ಣ, ಶಿವು ಎಲ್‌ಐಸಿ, ಬಸನಗೌಡ, ಮಲ್ಲೇಶ, ನರಸಿಂಹ ಖಾನಾಪೂರ, ನಾಗೇಶ ನಾಯಕ, ಚಂದ್ರಪ್ಪ, ಲಕ್ಷಣ ಉಪಸ್ಥಿತರಿದ್ದರು.

ಬಸನಗೌಡ ದದ್ದಲ್‌ರಿಂದ ಬಿರುಸಿನ ಪ್ರಚಾರ:

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಂಕೇಶ್ವರ ಮತ್ತು ಸಾದಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆದ ಶಾಸಕ ಬಸನಗೌಡ ದದ್ದಲ್ ಪ್ರವಾಸ ಕೈಗೊಂಡು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತಯಾಚಿಸಿದರು.

‘ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ನುಡಿದಂತೆ ನಡೆದಿದೆ. 5 ಗ್ಯಾರೆಂಟಿಗಳಾದ ಗೃಹ ಲಕ್ಷ್ಮಿ , ಶಕ್ತಿ, ಗೃಹ ಜ್ಯೋತಿ , ಯುವನಿಧಿ, ಅನ್ನಭಾಗ್ಯ ಯೋಜನೆಯಡಿ 5 ಕೆ ಜಿ ಅಕ್ಕಿ ಮತ್ತು ‌ಉಳಿದ 5 ಕೆ,ಜಿ ಅಕ್ಕಿಯ ಬದಲಾಗಿ ಹಣ ನೇರವಾಗಿ ಅವರಖಾತೆಗೆ ಹಣ‌ ಜಮಾವಣೆ ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ‘ ಎಂದು ತಿಳಿಸಿದರು.

‘ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಪ್ರತಿ ಮನೆಯ ಯಜಮಾನಿಗೆ ವಾರ್ಷಿಕ ₹1ಲಕ್ಷ ,ರೈತರ ಸಾಲ ಮನ್ನಾ , ಸೇರಿದಂತೆ ಇನ್ನೂ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರು ಬೂತ್‌ಮಟ್ಟದಲ್ಲಿ ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸಬೇಕು‘ ಎಂದು ಮನವಿ ಮಾಡಿದರು.

ಮಲ್ಲಿಕಾರ್ಜುನ ಗೌಡ, ಸೋಮಶೇಖರ, ಅಯ್ಯನಗೌಡ, ಪಾಟೀಲ, ನಾಗೇಂದ್ರಪ್ಪ, ಬಸಪ್ಪ ವಕೀಲ ಷಣ್ಮುಖಪ್ಪ, ಶ್ರೀನಿವಾಸ, ರಮೇಶ್ ರೋಸ್ಲಿ , ಕೆಈರಣ್ಣ , ವಿಶ್ವನಾಥ ರೆಡ್ಡಿ,ಹುಲಿಗಯ್ಯ ಸಾಹುಕಾರ, ಭೀಮಯ್ಯ, ಶಿವ ರಾಜಪ್ಪ ಗೌಡ, ವೆಂಕಟೇಶ, ಮೌನೇಶ. ದದ್ದಲ್,ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ರಾಯಚೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆದ ಶಾಸಕ ಬಸನಗೌಡ ದದ್ದಲ್ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚಿಸಿದರು
ರಾಯಚೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಧ್ಯಕ್ಷರೂ ಆದ ಶಾಸಕ ಬಸನಗೌಡ ದದ್ದಲ್ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT